ರಾಷ್ಟ್ರೀಯ

ಡಿಜಿಟಲೀಕರಣದಿಂದ .36 ಸಾವಿರ ಕೋಟಿ ಲಾಭ

Pinterest LinkedIn Tumblr

329702-ravishankar-prasadದೆಹಲಿ: ಕಳೆದ ಒಂದು ವರ್ಷದಲ್ಲಿ ಆರ್ಥಿಕ ವಹಿವಾಟುಗಳನ್ನು ಡಿಜಿಟಲೀಕರಣಗೊಳಿಸಿ ಕೇಂದ್ರ ಸರಕಾರ ರು. 36 ಸಾವಿರ ಕೋಟಿ ಪೋಲಾಗುವುದನ್ನು ತಡೆದಿದೆ ಎಂದು ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ.

ಪಿಎಚ್‌ಡಿ ಚೇಂಬರ್‌ನ 111ನೇ ವಾರ್ಷಿಕ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ‘ಸರಕಾರದ ಸಬ್ಸಿಡಿ ಹಣ ಮತ್ತು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ದಿನಗೂಲಿ ಮೊತ್ತವನ್ನು ಆಧಾರ್ ಜತೆಗೆ ಜೋಡಿಸಿರುವ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆಯಿಂದ ಈ ಯಶಸ್ಸು ಸಾಧಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಇ-ಕಾಮರ್ಸ್ ಸೌಲಭ್ಯ ಪರಿಣಾಮಕಾರಿಯಾಗಿ ದೊರೆಯುವಂತೆ ಮಾಡಿ,ಸಾಮಾಜಿಕ ಯೋಜನೆಗಳಿಂದ ಕೇಂದ್ರಕ್ಕೆ ಕಳೆದ 12 ತಿಂಗಳಲ್ಲಿ ರು.36 ಸಾವಿರ ಕೋಟಿ ಉಳಿತಾಯವಾಗಿದೆ ಎಂದು ಪ್ರಸಾದ್ ವಿವರಿಸಿದ್ದಾರೆ. ಈ ಯಶಸ್ಸಿಗೆ ಪ್ರಧಾನಿ ಅವರ ಡಿಜಿಟಲ್ ಇಂಡಿಯಾ ಕೂಡ ಪ್ರಮುಖ ಪ್ರೇರಕ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟದ್ದಾರೆ.

Comments are closed.