ಮನೋರಂಜನೆ

ಅಪ್ಪಟ ರಾಜಕೀಯ ವಿಷಯವನ್ನು ಒಳಗೊಂಡ ಸಿನಿಮಾ ಮಾಡುವುದು ಇಲ್ಲಿ ಅಸಾಧ್ಯ: ನಿರ್ದೇಶಕ ಪ್ರಕಾಶ್‌ ಝಾ

Pinterest LinkedIn Tumblr

prakash-jhaಪಣಜಿ: ರಾಜಕೀಯ ವಿಷಯಾಧಾರಿತ ಸಿನಿಮಾಗಳ ನಿರ್ಮಾಣದಲ್ಲಿ ಖ್ಯಾತಿ ಗಳಿಸಿರುವ ನಿರ್ದೇಶಕ ಪ್ರಕಾಶ್‌ ಝಾ ‘ಅಪ್ಪಟ ರಾಜಕೀಯ ವಿಷಯವನ್ನು ಒಳಗೊಂಡ ಸಿನಿಮಾ ಮಾಡುವುದು ಇಲ್ಲಿ ಅಸಾಧ್ಯ. ಏಕೆಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲ ’ ಎಂದರು.

47ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ ತಜ್ಞರ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಕಾಶ್‌ ಝಾ ‘ವಿಶ್ಲೇಷಣೆ, ವಿಮರ್ಶೆಗೆ ಒಳಪಟ್ಟ ಅಪ್ಪಟ ರಾಜಕೀಯ ವಿಷಯ ಆಧಾರಿತ ಸಿನಿಮಾ ಮಾಡಿ, ಹೇಳಬೇಕಿರುವುದನ್ನು ಹಾಗೆಯೇ ಹೇಳಲು ಸ್ವಾತಂತ್ರ್ಯ ಬೇಕು. ಆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲಿಲ್ಲ. ಇದು ಬದಲಾಗುವ ಭರವಸೆಯೂ ಇಲ್ಲ. ಅದಕ್ಕೆ ತನ್ನದೇ ಆದ ಐತಿಹಾಸಿಕ, ಪೌರಾಣಿಕ ಹಾಗೂ ನೈಜ ಕಾರಣಗಳಿವೆ. ಭಾರತದಲ್ಲಿ ಸರ್ಕಾರಕ್ಕಿಂತಲೂ ಸಮುದಾಯ ಯಾವಾಗಲೂ ಶಕ್ತಿಯುತ ಎಂಬುದನ್ನು ನಂಬುತ್ತೇನೆ’ ಎಂದರು.

ವ್ಯಕ್ತಿ ಅಥವಾ ಸಮುದಾಯವನ್ನು ಹೆಸರಿಸಿದರೆ ನಿಮ್ಮ ಹತ್ಯೆಯಾಗುತ್ತದೆ. ಸಿನಿಮಾ ಬಿಡುಗಡೆಗೂ ಮುಂಚಿತವಾಗಿಯೇ ಹಲವರಿಂದ ನಾನು ಸಂಕಷ್ಟ ಅನುಭವಿಸಿದ್ದೇನೆ.

ಸಿನಿಮಾ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ ಎಂದು ಝಾ ಅಭಿಪ್ರಾಯ ಹಂಚಿಕೊಂಡರು.

ಗಂಗಾಜಲ್, ಅಪಹರಣ್‌, ರಾಜ್‌ನೀತಿ, ಸತ್ಯಾಗ್ರಹ ಸೇರಿದಂತೆ ಹಲವು ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ.

Comments are closed.