ಕರ್ನಾಟಕ

ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ: ಸಂತೋಷ್ ಹೆಗ್ಡೆ

Pinterest LinkedIn Tumblr

santosh_hegdeಬೆಂಗಳೂರು ನ-೨೬: ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ, ನೈತಿಕ ಪ್ರಜ್ಞೆ ದೇಶ ಪ್ರೇಮವನ್ನ ಮೂಡಿಸುವ ದಿಕ್ಕಿನತ್ತ ನಮ್ಮೆಲ್ಲರ ಆಲೋಚನೆಗಳು ಸಾಗಿ ಉತ್ತಮ ಪ್ರಜಾ ಪ್ರಭುತ್ವ ವ್ಯವಸ್ಥೆಯ ದೇಶವನ್ನಾಗಿಸುವತ್ತ ದೃಢ ಹೆಜ್ಜೆ ಇಡಬೇಕಾಗಿದೆ ಎಂದು ನಿವೃತ್ತ ಲೋಕಾಯುಕ್ತ ಡಾ.ಎನ್.ಸಂತೋಷ್ ಹೆಗಡೆ ತಿಳಿಸಿದರು
ಕೆಂಗೇರಿ ಬಳಿಯ ದುಬಾಸಿಪಾಳ್ಯದ ಜ್ಞಾನ ಭೋದಿನಿ ಶಾಲೆಯ ಸುವರ್ಣ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗವು ತನ್ನ ಮಿತಿಯನ್ನ ಮರೆತು ವರ್ತಿಸುತ್ತಿರುವುದರಿಂದಾಗಿ ದೇಶದ ಪ್ರಗತಿಗೆ ತೊಡಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾಗತೀಕರಣ, ನಗರೀಕರಣ, ಸ್ವಾರ್ಥಪರಚಿಂತನೆಯ ಪರಿಣಾಮದಿಂದಾಗಿ ಮನುಷ್ಯ ಮನುಷ್ಯರನಡುವಿನ ಸಂಬಂಧದಲ್ಲಿ ಕಂದಕ ನಿರ್ಮಾಣವಾಗಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ ಎಂದು ವಿಷಾದಿಸಿದರು.
ಅರ್ಸುಲೈನ್ ಪ್ರಾನ್ಸಿಸ್ಕನ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಭಗಿನಿ ಲಿಲ್ಲಿ ಪಿಂಟೊ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆವತಿಯಿಂದ ೬೮ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದ್ದು ಅಕ್ಷರ ವಂಚಿತ ಸಮುದಾಯದ ಏಳಿಗೆಗೆ ಹಾಗು ಹಿಂದುಳಿದ ವರ್ಗಗಳ ಬಡವರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸಂಸ್ಥೆ ಹಗಲಿರುಳು ಶ್ರಮಿಸಿ ಆದರ್ಶ ಪ್ರಜೆಗಳನ್ನಾಗಿ ರೂಪಿಸುವ ಜವಬ್ದಾರಿ ವಹಿಸಲಾಗಿದೆ ಎಂದರು ಯುವ ಜನಾಂಗ ಸಮಾಜಮುಖಿ ಚಿಂತನೆಗಳನ್ನ ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡಬೇಕೆಂದರು.
ಮುಖ್ಯ ಶಿಕ್ಷಕಿ ಭಗಿನಿ ಮೀರಾ ಡಿಸೋಜ, ಜ್ಞಾನಭೋದಿನಿ ಶಾಲೆ ಕಳೆದ ೫೦ ವರ್ಷದಿಂದ ನಿಸ್ವಾರ್ಥದಿಂದ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿ ವಿಜ್ಞಾನಿ, ಎಂಜಿನಿಯರ್, ಡಾಕ್ಟರ್ ಸೇರಿದಂತೆ ಹಲವಾರು ಸಮಾಜ ಸೇವಕರನ್ನು ಕೊಡುಗೆಯಾಗಿ ನೀಡಿರುವ ಹೆಮ್ಮೆ ನಮ್ಮದಾಗಿದೆ ಎಂದರು.
ಚಿತ್ರ: ಜ್ಞಾನಭೋದಿನಿ ಶಾಲೆಯಲ್ಲಿ ಅತ್ಯುತ್ತಮ ಸೇವೆಸಲ್ಲಿಸಿ ನಿವೃತ್ತರಾದ ಮುಖ್ಯ ಶಿಕ್ಷಕಿಯರುಗಳಿಗೆ ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗಡೆ ಅವರು ಸಂಭ್ರಮ ಕಾಂತಿ ಪುಸ್ತಕವನ್ನು ಬಿಡುಗಡೆ ಮಾಡಿದರು, ಬಿಬಿಎಂಪಿ ಸದಸ್ಯ ಶಾರದ ಜಿ. ಮುನಿರಾಜು, ಭಗಿನಿ ಲಿಲ್ಲಿ ಪಿಂಟೊ, ಭಗಿನಿ ಮೀರಾ ಡಿಸೋಜ, ಸಮಾಜ ಸೇವಕ ಎಂ.ಸಿ.ಶಿವಕುಮಾರ್, ವಿ.ವಿ.ಸತ್ಯನಾರಾಯಣ, ಸಾಲ್ವದೊರೊ ಫರ್ನಾಂಡಿಸ್, ಲಿಲ್ಲಿ ರೊಡ್ರಿಗಸ್, ವೃತ್ತ ನಿರೀಕ್ಷಕ ಗಿರಿರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಅವರುಗಳು ಸನ್ಮಾನಿಸಿದರು.

Comments are closed.