ಕರ್ನಾಟಕ

ತಾತನ ಜೊತೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿ ಅಪಹರಣ

Pinterest LinkedIn Tumblr

ajjaಕೆ.ಆರ್. ಪುರಂ, ನ. ೨೬- ತಾತನ ಜೊತೆ ಶಾಲೆಗೆ ಹೋಗುತ್ತಿದ್ದ ಮಗುವನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿರುವ ಘಟನೆ ಕೆ.ಆರ್. ಪುರಂನ ಅಯ್ಯಪ್ಪ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ನಾರಾಯಣ ಇ ಟೆಕ್ನೋ ಶಾಲೆಯಲ್ಲಿ ೪ನೇ ತರಗತಿಯಲ್ಲಿ ಓದುತ್ತಿದ್ದ ಮಯಾಂಕ್ (೧೦) ಅಪಹರಣಕ್ಕೆ ಒಳಗಾದ ಮಗು. ಬೆಳಿಗ್ಗೆ ೮ ಗಂಟೆ ಸುಮಾರಿಗೆ ನಾರಾಯಣ ಇ ಟೆಕ್ನೋ ಶಾಲೆಗೆ ತಾತನ ಜೊತೆ ತೆರಳುವ ವೇಳೆ ಸಿನಿಮೀಯ ರೀತಿಯಲ್ಲಿ ಬಂದ ಕಾರಿನಲ್ಲಿ ಮಗುವನ್ನು ಅಪಹರಣ ಮಾಡಲಾಗಿದೆ.
ಟಿಂಬರ್ ಉದ್ಯಮಿ ಹರೀಶ್ ಅವರ ಮಗನಾದ ಮಯಾಂಕ್,ಅಯ್ಯಪ್ಪನಗರದ ಶಾಲೆಗೆ ಹೋಗುವ ಸಂದರ್ಭದಲ್ಲಿ ಅಪಹರಣವಾಗಿದ್ದು,ಅಪಹರಣಕಾರರ ಪತ್ತೆಗೆ ಕೆ.ಆರ್. ಪುರಂ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Comments are closed.