ರಾಷ್ಟ್ರೀಯ

ಹೊಸ ನೋಟಿನ ನಕಲಿ ಜಾಲದ ಆರು ಮಂದಿ ಬಂಧನ

Pinterest LinkedIn Tumblr

fake-notesಹೈದರಾಬಾದ್‌: ₹2,000 ಹೊಸ ನೋಟು ಸೇರಿದಂತೆ ₹10, 20, 50, 100, 500, 1,000 ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ ಸರಬರಾಜು ಮಾಡುತ್ತಿದ್ದ ಆರು ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಈಚೆಗಷ್ಟೆ ಬಿಡುಗಡೆಯಾದ ₹2,000 ಮುಖಬೆಲೆಯ ನೋಟು ಸೇರಿದಂತೆ ಇತರ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ತಂಡವನ್ನು ಬಂಧಿಸಿದ್ದು, ಅವರಿಂದ ₹2,22,310 ವಶಕ್ಕೆ ಪಡೆದಿದೆ ಎಂದು ರಚಕೊಂಡ ಪೊಲೀಸ್‌ ಆಯುಕ್ತ ಮಹೇಶ್‌ ಎಂ. ಭಾಗವತ್‌ ತಿಳಿಸಿದ್ದಾರೆ.

ಆರು ಮಂದಿ ಕಡಿಮೆ ಮುಖಬೆಲೆಯ ನೋಟುಗಳು, ₹500, 1,000 ಮುಖಬೆಲೆಯ(ಈಗ ನಿಷೇಧಿಸಿರುವ) ನಕಲಿ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಯಲ್ಲಿ ಚಲಾವಣೆ ಮಾಡಿದ್ದಾರೆ. ಪ್ರಸ್ತುತ ₹2,000 ಮುಖಬೆಲೆಯ ನೋಟನ್ನೂ ಮುದ್ರಿಸಿದ್ದು, ಚಲಾವಣೆಗೆ ತರಲು ಯತ್ನಿಸುತ್ತಿದ್ದರು ಎಂದು ಭಾಗವತ್‌ ಮಾಹಿತಿ ನೀಡಿದ್ದಾರೆ.

ಪೊಲೀಸರು ₹50 ಸಾವಿರ ಅಸಲಿ ನೋಟು ಹಾಗೂ ಎರಡು ನಕಲು ಮಷಿನ್‌ಗಳನ್ನು ಮತ್ತು ನಕಲಿಯ ₹2,000 ಮುಖಬೆಲೆಯುಳ್ಳ 105 ನೋಟುಗಳು, ₹100 ಮುಖಬೆಲೆಯ 102 ನೋಟುಗಳು, ₹50ರ 105 ನೋಟುಗಳು, ₹20ರ 117 ನೋಟುಗಳು, ₹10ರ 102 ನೋಟುಗಳು, ಒಟ್ಟು ₹2,22,310 ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Comments are closed.