ಕರ್ನಾಟಕ

ಹೊಸ ನೋಟಿನಲ್ಲಿ ಚಿಪ್‌ ಇಲ್ಲ: ಇಸ್ರೊ

Pinterest LinkedIn Tumblr

ISROದಾವಣಗೆರೆ: ಹೊಸ ₹2,000 ನೋಟಿನಲ್ಲಿ ಯಾವುದೇ ಚಿಪ್‌ ಇಲ್ಲ. ಈ ಬಗೆಗಿನ ಸುದ್ದಿಗಳು ಊಹಾಪೋಹ ಎಂದು ಇಸ್ರೊ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ಕುಮಾರ್ ಸ್ಪಷ್ಟಪಡಿಸಿದರು.

ನಗರದ ರಾಷ್ಟ್ರೋತ್ಥಾನ ಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ‘ನೋಟಿನಲ್ಲಿ ಜಿಪಿಎಸ್‌ ತಂತ್ರಜ್ಞಾನ ಇಲ್ಲ; ಇದೆಲ್ಲಾ ಸುಳ್ಳು’ ಎಂದರು.

ಬಾಹ್ಯಾಕಾಶ ತಂತ್ರಜ್ಞಾನದಿಂದ ಕಪ್ಪುಹಣ ಹೊಂದಿರುವವರು, ಭ್ರಷ್ಟಾಚಾರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದೇ ಹೊರತು ಮನುಷ್ಯರು ಮಾಡುವ ಕೆಲಸಗಳ ಬಗ್ಗೆ ತಿಳಿದುಕೊಳ್ಳುವುದು ಕಷ್ಟ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಭಯೋತ್ಪಾದಕರನ್ನು ಪತ್ತೆ ಹಚ್ಚುವುದೂ ಕಷ್ಟ’ ಎಂದ ಅವರು, ಭೂಮಿ ಮೇಲಿನ ಚಟುವಟಿಕೆಗಳನ್ನು 24ಗಂಟೆ ನಿರಂತರ ಗಮನಿಸುವಂತಹ ಯಾವುದೇ ಉಪಗ್ರಹ ಇದುವರೆಗೂ ಇಲ್ಲ. ಮುಂದೆ ಉಡಾವಣೆ ಮಾಡುವ ಉಪಗ್ರಹಗಳಿಗೇ ಹೆಚ್ಚಿನ ಸಾಮಾರ್ಥ್ಯದ ಕ್ಯಾಮೆರಾಗಳನ್ನು ಅಳವಡಿಸಿದರೆ ಭಯೋತ್ಪಾದನೆ ಮತ್ತಿತರ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೂರ್ಯಗ್ರಹದ ಸಂಪೂರ್ಣ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಆದಿತ್ಯ ಉಪಗ್ರಹ ಸಿದ್ಧಪಡಿಸುವ ಪ್ರಕ್ರಿಯೆ ನಡೆದಿದೆ. ಇದು ಸೂರ್ಯಗ್ರಹಣದಲ್ಲಿ ಸೂರ್ಯನ ಸಂಪೂರ್ಣ ಚಿತ್ರಣ ನೀಡಲು ನೆರವಾಗಲಿದೆ ಎಂದರು.

‘ರಿಸೋರ್ಸ್ ಸ್ಯಾಟ್’ ಉಡಾವಣೆ: ರೈತರಿಗೆ ಮಳೆ, ಬೆಳೆ ಮಾಹಿತಿ ನೀಡುವ ಉದ್ದೇಶದಿಂದ ‘ರಿಸೋರ್ಸ್ ಸ್ಯಾಟ್’ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆದಿದೆ. ಇದೇ ಡಿಸೆಂಬರ್‌ನಲ್ಲಿ ಉಡಾವಣೆ ಸಾಧ್ಯತೆ ಇದೆ ಎಂದು ಹೇಳಿದರು.

Comments are closed.