ಮನೋರಂಜನೆ

ಪ್ರಪಂಚದ ಪ್ರಭಾವಿ ಮಹಿಳೆಯ ಸ್ಥಾನ ಪಡೆದ ಸನ್ನಿ ಲಿಯೋನ್

Pinterest LinkedIn Tumblr

sunneyಮುಂಬೈ: ನೀಲಿ ಚಿತ್ರದ ನಟಿ, ಸನ್ನಿ ಲಿಯೋನ್ 2016 ರ ಪ್ರಪಂಚದ 100 ಪ್ರಭಾವಿ ಮಹಿಳೆಯರಲ್ಲಿ ಲಿಸ್ಟ್ ಸ್ಥಾನ ಪಡೆದಿದ್ದಾರೆ.

ಕಳೆದ ಬಾರಿಯೂ ಸಹ 100 ಪ್ರಭಾವಿ ಮಹಿಳೆಯರಲ್ಲಿ ಸ್ಥಾನ ಪಡೆದಿದ್ದ ಸನ್ನಿ ಈ ಬಾರಿಯ ಇಂಗ್ಲೆಂಡ್‍ನ ಬಿಬಿಸಿಯ ಪವರ್‍ಫುಲ್ ಮಹಿಳೆ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಎಂಜಿನಿಯರ್, ಉದ್ಯಮಿಗಳು, ಕ್ರೀಡಾಪಟುಗಳು, ಫ್ಯಾಷನ್ ಸೇರಿದಂತೆ ವಿವಿಧ ಕ್ಷೇತ್ರಗಳ ವಲಯಗಳ ಮಹಿಳೆಯರನ್ನು ಪರಿಗಣಿಸಲಾಗಿತ್ತು.

ಸನ್ನಿ ಲಿಯೋನ್ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಐದು ವರ್ಷಗಳಾಗಿವೆ. ಜಿಸ್ಮ್-2 ಚಿತ್ರದ ಮೂಲಕ ಸನ್ನಿ ತಮ್ಮ ಸಿನಿಮಾ ಕೆರಿಯರ್ ಆರಂಭಿಸಿದ್ದರು. ನಂತರ ಬಂದ `ರಾಗಿಣಿ ಎಂಎಂಎಸ್2′ ಚಿತ್ರದಿಂದ ಪ್ರೇಕ್ಷಕರಿಗೆ ಹತ್ತಿರವಾದರು. ಏಕ ಪಹೇಲಿ ಲೀಲಾ, ಜಾಕ್‍ಪಾಟ್ ಚಿತ್ರಗಳಲ್ಲೂ ತಮ್ಮ ಮಾಧಕತೆಯಿಂದ ತಮ್ಮದೇ ಆದ ಅಭಿಮಾನಿಗಳನ್ನು ಬೆಳೆಸಿಕೊಂಡಿದ್ದಾರೆ.

ಬಿಗ್‍ಬಾಸ್ ಸೀಸನ್-5 ರಲ್ಲಿಯೂ ಸನ್ನಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಬಿಗ್‍ಬಾಸ್-10 ರಲ್ಲಿ ಬಿಗ್‍ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ.

ಬಿಬಿಸಿ ಟಾಪ್ 100 ಪಟ್ಟಿಯಲ್ಲಿ ಭಾರತದಿಂದ ಗೌರಿ ಚಿಂದಾರಕರ್(ಸಾಂಗ್ಲಿ), ಮಲ್ಲಿಕಾ ಶ್ರೀನಿವಾಸನ್(ಚೆನ್ನೈ), ನೇಹಾ ಸಿಂಗ್(ಮುಂಬೈ) ಮತ್ತು ಸಾಲುಮರದ ತಿಮ್ಮಕ್ಕ(ಕರ್ನಾಟಕ) ಸ್ಥಾನ ಪಡೆದಿದ್ದಾರೆ.

Comments are closed.