ನವದೆಹಲಿ(ನ.23): ಕೊನೆಗೂ ಪ್ರತಿಪಕ್ಷಗಳ ಆಗ್ರಹಕ್ಕೆ ಮಣಿದ ಪ್ರಧಾನಿ ನರೇಂದ್ರಮೋದಿ ಇವತ್ತು ಲೋಕಸಭೆ ಕಲಾಪಕ್ಕೆ ಹಾಜರಾಗಿದ್ದಾರೆ.
ಕಲಾಪ ಆರಂಭವಾಗುತ್ತಿದ್ದಂತೆ, ಸದನಕ್ಕೆ ಆಗಮಿಸಿದ ಮೋದಿ, ತಮ್ಮ ಕುರ್ಚಿಯಲ್ಲಿ ಆಸೀನರಾದರು. ಈ ವೇಳೆ, ಪ್ರತಿಪಕ್ಷಗಳು ಮೋದಿ ಹೇಳಿಕೆ ನೀಡುವಂತೆ ಬಿಗಿಪಟ್ಟುಹಿಡಿದರು.
ಇದರಿಂದ, ಸದನದಲ್ಲಿ ತೀವ್ರ ಗದ್ದಲ ಉಂಟಾಯಿತು. ಸ್ಪೀಕರ್ ಸುಮಿತ್ರಾಮಹಾಜನ್, ಕಲಾಪದ ನಿಯಮ 377 ಪ್ರಕಾರ, ಬೇಕಾದಂತೆ ಮಾತನಾಡುವಂತಿಲ್ಲ. ಅವಕಾಶ ಸಿಕ್ಕಾಗ ಮಾತನಾಡಬೇಕೆಂದು ತಾಕೀತು ಮಾಡಿದರು. ಇದರಿಂದ ಗದ್ದಲ, ಕೋಲಾಹಲ ತೀವ್ರಗೊಂಡಿತು. ಹೀಗಾಗಿ, ಕಲಾಪವನ್ನು ಕೆಲಹೊತ್ತುಮುಂದೂಡಲಾಯ್ತು.