ಕರ್ನಾಟಕ

ಬ್ಯಾಂಕ್ ಗಳಿಂದ ಪಡೆಯುವ ಸ್ವೈಪ್ ಮಷಿನ್ ಯಾರಿಗೆ ಅನುಕೂಲ?

Pinterest LinkedIn Tumblr

swipeಚಿತ್ರದುರ್ಗ/ಬೆಂಗಳೂರು: ಬ್ಯಾಂಕ್‌ಗಳಲ್ಲಿ ಚಾಲ್ತಿ ಖಾತೆ (ಕರೆಂಟ್ ಅಕೌಂಟ್) ಹೊಂದಿದ ಯಾವುದೇ ವ್ಯಾಪಾರಸ್ಥರು ಕಾರ್ಡ್ ಸ್ವೈಪ್ ಮಷಿನ್ ಪಡೆಯಬಹುದು. ಉಳಿತಾಯ ಖಾತೆ ಹೊಂದಿರುವವರು ಮಷಿನ್ ಪಡೆಯಬಹುದು. ಆದರೆ, ಸ್ವೈಪ್ ಮಾಡಿದಾಗ ಕಟ್ ಆಗುವ ಕಮಿಷನ್ ತುಸು ದುಬಾರಿಯಾಗುತ್ತದೆ.

ಸಾಮಾನ್ಯವಾಗಿ ವ್ಯಾಪಾರಸ್ಥರಿಗಷ್ಟೇ ಈ ಮಷಿನ್ ಅನುಕೂಲ. ಮೊದಲು ಬ್ಯಾಂಕ್‌ಗೆ ಬಂದು ಅರ್ಜಿ ಸಲ್ಲಿಸಬೇಕು. ಅದನ್ನು ಕೇಂದ್ರ ಕಚೇರಿಗೆ ಶಿಫಾರಸು ಮಾಡಿ, ಅನುಮೋದನೆ ಪಡೆದು ಮಷಿನ್ ವಿತರಿಸುತ್ತಾರೆ. ಈ ಪ್ರಕ್ರಿಯೆ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ತುಸು ವ್ಯತ್ಯಾಸವಾಗಬಹುದು.

ಬಳಸುವ ಬಗೆ ಹೇಗೆ? ಡೆಬಿಟ್ ಕಾರ್ಡ್ ಬಳಸಬಹುದು. ಇದರಲ್ಲಿ ಸಿಗ್ನೇಚರ್ ಕಾರ್ಡ್, ಪ್ಲಾಟಿನಂ ಕಾರ್ಡ್ ಬಳಕೆ ಮಾಡಬಹುದು. ಇದೇ ಮಷಿನ್‌ನಲ್ಲಿ ಕ್ರೆಡಿಟ್ ಕಾರ್ಡ್ ಕೂಡ ಬಳಸಬಹುದು. ಡೆಬಿಟ್‌ ಕಾರ್ಡ್‌ ಅನ್ನು ಮಷಿನ್ ಬಲಭಾಗದಲ್ಲಿ ಸ್ವೈಪ್ ಮಾಡುತ್ತಾರೆ. ಕ್ರೆಡಿಟ್‌ ಕಾರ್ಡ್‌ಗೆ ಚಿಪ್ ಅಳವಡಿಸಿ ರುವುದರಿಂದ, ಮಷಿನ್ ಕೆಳಭಾಗದಲ್ಲಿ ಸ್ವೈಪ್ ಮಾಡುತ್ತಾರೆ.

ಎಷ್ಟು ಕಮಿಷನ್ ಕಟ್ ಆಗುತ್ತದೆ ? ಸ್ವೈಪ್ ಮಷಿನ್‌ನಿಂದ ಅಂಗಡಿಯ ವರಿಗಷ್ಟೇ ಕಮಿಷನ್ ಹೊರೆ. ಗ್ರಾಹಕ ರಿಗಿಲ್ಲ. ಕಾರ್ಪೊರೇಷನ್ ಬ್ಯಾಂಕ್‌ ನಲ್ಲಿ ಮಾಲೀಕರಿಗೆ ತಿಂಗಳಿಗೆ ₹ 750 ಶುಲ್ಕ, ಒಟ್ಟು ಸ್ವೈಪ್ ಮೇಲಿನ ಹಣಕ್ಕೆ ಶೇ 1.5ರಷ್ಟು ಕಮಿಷನ್ ಕಟ್ ಆಗುತ್ತದೆ. ಕಿರಾಣಿ ಅಂಗಡಿಯವರಿಗೆ (ವಹಿವಾಟು ಆಧರಿಸಿ) ದಿನಕ್ಕೆ ₹ 50 ಸಾವಿರದಷ್ಟು ಸ್ವೈಪ್ ಮಾಡಲು ಮಿತಿ ವಿಧಿಸಲಾಗಿದೆ. ಬೇರೆ ವ್ಯಾಪಾರಿಗಳಿಗೆ ಅವರವರ ವಹಿವಾಟು ಆಧರಿಸಿ, ಕೇಂದ್ರ ಕಚೇರಿ ನೀಡುವ ಶಿಫಾರಸಿನ ಅನ್ವಯ ಹಣದ ಮಿತಿ ನಿಗದಿಪಡಿಸಲಾಗುತ್ತದೆ ಎನ್ನುತ್ತಾರೆ ವ್ಯವಸ್ಥಾಪಕ ಆನಂದಮೂರ್ತಿ.

ಆಕ್ಸಿಸ್ ಬ್ಯಾಂಕ್‌ನಲ್ಲಿ ಒಂದು ಸಾರಿ ಡೆಬಿಟ್‌ ಕಾರ್ಡ್‌ ಸ್ವೈಪ್ ಮಾಡಿ ₹2ಸಾವಿರಕ್ಕಿಂತ ಕಡಿಮೆ ವಹಿವಾಟು ಮಾಡಿದರೆ ಶೇ 0.75 ಕಮಿಷನ್ ₹ 2ಸಾವಿರಕ್ಕಿಂತ ಹೆಚ್ಚಾದರೆ ಶೇ 1 ಕಮಿಷನ್ ಕಟ್ ಆಗುತ್ತದೆ. ಕ್ರೆಡಿಟ್ ಕಾರ್ಡ್‌ ಸ್ವೈಪ್‌ಗೆ ₹ 1.5 ಕಮಿಷನ್‌(ಹೆಚ್ಚಿನ ಮಾಹಿತಿಗೆ ಆಯಾ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು).

ಮಷಿನ್‌ಗಳಲ್ಲಿ ಆಧುನಿಕ ತಂತ್ರಜ್ಞಾನ, ಅಂತರ್ಜಾಲ ಸಂಪರ್ಕ ಕಡ್ಡಾಯ: ಈಗಿರುವುದು ಇಂಟರ್‌ನೆಟ್‌ ಆಧಾರಿತ ‘ಕಾರ್ಡ್ ಸ್ವೈಪ್ ಮಷಿನ್‌’. ಅಂದರೆ, ಯಾವು ದಾದರೂ ಅಂತರ್ಜಾಲ ಸಂಪರ್ಕ ಇರಬೇಕು. ಈಗ ಸಿಮ್ ಆಧಾರಿತ (ಡಾಂಗಲ್ ತರಹ)ಮಷಿನ್‌ಗಳು ಬಂದಿವೆ.

‌‌ವೈಫೈ ತಂತ್ರಜ್ಞಾನ ಬಳಸುವಂತಹ ಮಷಿನ್‌ಗಳೂ ಚಾಲ್ತಿಯಲ್ಲಿವೆ. ಈ ಮಷಿನ್‌ಗಳು ಎಲ್ಲೆಡೆ ಕೊಂಡೊಯ್ಯಬಹುದು. ಗ್ರಾಹಕರ ಬಳಿಗೆ ಕೊಂಡೊಯ್ದು, ಪಿನ್‌ ನಂ, ಪಾಸ್‌ವರ್ಡ್‌ ಪಡೆಯಬಹುದು. ಸದ್ಯ ದುರ್ಗದಲ್ಲಿ ಅಂಥ ಮೆಷಿನ್‌ಗಳಿಲ್ಲ ಎನ್ನುತ್ತಾರೆ ಬಟ್ಟೆ ವ್ಯಾಪಾರಿ ಮನೋಜ್.

Comments are closed.