ಮನೋರಂಜನೆ

ಬಾಹುಬಲಿ 2 ಕ್ಲೈಮ್ಯಾಕ್ ವಿಡಿಯೋ ಲೀಕ್

Pinterest LinkedIn Tumblr

Bahubali-2ಹೈದರಾಬಾದ್: ಬಾಹುಬಲಿ-2 ಕ್ಲೈಮಾಕ್ಸ್ ವಿಡಿಯೋವನ್ನು ಲೀಕ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಫಿಕ್ಸ್ ಎಡಿಟರ್‍ನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಯುಟ್ಯೂಬ್‍ನಲ್ಲಿ ವಿಡಿಯೋ ಲೀಕ್ ಆಗುತ್ತಿದ್ದಂತೆ ಚಿತ್ರದ ನಿರ್ಮಾಪಕ ಮತ್ತು ಫ್ರಾಂಚೈಸಿ ಶೋಬು ಯರ್ಲಾಗಡ ಮತ್ತು ಪ್ರಸಾದ್ ದೇವಿನೇನಿ ಹೈದ್ರಾಬಾದ್‍ನ ಜುಬ್ಲೀ ಹಿಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಾಹುಬಲಿ-2 ಚಿತ್ರ ಭಾರತ ಸಿನಿಮಾ ರಂಗದಲ್ಲಿ ಅತ್ಯಂತ ಪ್ರಮುಖ ಚಿತ್ರವಾಗಿದ್ದು, ಜನರು ಸಿನಿಮಾ ಮಾಡಲು ಕಾತುರರಾಗಿದ್ದಾರೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಬಾಹುಬಲಿ ಚಿತ್ರ ಸಿಲ್ವರ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡಿತ್ತು. ಹಾಗಾಗಿ ಅದರ ಮುಂದುವರಿದ ಭಾಗ ಪ್ರೇಕ್ಷಕರಲ್ಲಿ ಕುತುಹೂಲವನ್ನು ಹೆಚ್ಚಿಸಿದೆ.

ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ ಮತ್ತು ರಾಣಾ ದಗ್ಗುಬಾಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬಾಹುಬಲಿಯ ಮೊದಲನೇ ಭಾಗದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ ಎನ್ನುವ ಪ್ರಶ್ನೆಗೆ 2017ರ ಏಪ್ರಿಲ್ 28ರಂದು ಉತ್ತರ ಸಿಗಲಿದೆ.

Comments are closed.