ಮನೋರಂಜನೆ

ಶಾರೂಖ್ ಜೊತೆ ನಟಿಸುವುದು ಅಂದರೆ….ನಟಿ ಮಹಿರಾ ತಾಯಿ ಅಳಲು ಪ್ರಾರಂಭಿಸುತ್ತಿದ್ದರಂತೆ.

Pinterest LinkedIn Tumblr

mahira-khanಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಜೊತೆ ನಟಿಸುವುದು ಅಂದರೆ ನಟಿಯರಿಗೆ ಒಂದು ಸುಂದರ ಕನಸು. ಆದರೆ ಇಲ್ಲಿ ಪಾಕಿಸ್ತಾನಿ ನಟಿ ಮಹಿರಾ ತಾಯಿ ಶಾರುಖ್ ಹೆಸರು ಕೇಳುತ್ತಲೇ ಅಳಲು ಪ್ರಾರಂಭಿಸುತ್ತಿದ್ದರಂತೆ.

ತಾಯಿ ಅತ್ತ ವಿಚಾರವನ್ನು ಸ್ವತಃ ಮಹಿರಾ ಖಾನ್ ಹೇಳಿದ್ದಾರೆ. ಬಾಲಿವುಡ್ ಕಿಂಗ್‍ಖಾನ್ ಶಾರೂಖ್‍ರ ಮುಂಬರುವ `ರೈಯಿಸ್’ ಚಿತ್ರದಲ್ಲಿ ಲೀಡ್ ರೋಲ್‍ಗೆ ನಾನು ಆಯ್ಕೆ ಆದ ವಿಚಾರ ತಿಳಿದು ತಾಯಿ ಅಳುತ್ತಿದ್ದರು ಎಂದು ಮಹಿರಾ ಖಾನ್ ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಾನು ಶಾರೂಖ್ ಜೊತೆ ನಟಿಸುತ್ತಿದ್ದೇನೆ ಎಂದು ಹೇಳಿದಾಗಲೂ ಪ್ರತಿಬಾರಿ ತಾಯಿ ಅಳುತ್ತಾ ನಾನು ಸುಳ್ಳು ಹೇಳುತ್ತೇನೆ ಎಂದು ಹೇಳುತ್ತಿದ್ದರು. ನನಗೆ ಶಾರುಖ್ ಜೊತೆ ನಟಿಸಲು ಅವಕಾಶ ಸಿಕ್ಕಿದೆ ಎಂದು ಹೇಳಿದರೂ ತಾಯಿ ನಂಬುತ್ತಿರಲಿಲ್ಲ ಎಂದು ವಿವರಿಸಿದರು.

ಶಾರೂಖ್ ಆಭಿನಯದ `ರೈಯಿಸ್’ 2017ರಲ್ಲಿ ತೆರೆಕಾಣಲಿದೆ. ರೈಯಿಸ್ ಚಿತ್ರದ ಫಸ್ಟ್ ಲುಕ್ ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Comments are closed.