ರಾಷ್ಟ್ರೀಯ

ನೋಟು ಬದಲಾವಣೆಗೆ ನಿಮ್ಮ ಪರವಾಗಿ ಸಾಲಿನಲ್ಲಿ ನಿಲ್ಲುವ ಸಹಾಯಕರಿಗೆ ಗಂಟೆಗೆ 90 ರೂ.

Pinterest LinkedIn Tumblr

bank-fiನವದೆಹಲಿ: ನಿತ್ಯ ಬ್ಯಾಂಕ್‌ಗಳ ಮುಂದೆ ಸಾಲಿನಲ್ಲಿ ನಿಂತು ನಿಟ್ಟುಸಿರು ಬಿಡುತ್ತಿರುವವರಿಗೆ ಶುಭ ಸುದ್ದಿ! ನಿಮ್ಮ ಪರವಾಗಿ ಸಾಲಿನಲ್ಲಿ ನಿಲ್ಲಲು ಸಹಾಯಕರನ್ನು ಒದಗಿಸುವ ವ್ಯವಸ್ಥೆಗೆ ಸ್ಟಾರ್ಟ್‌ಅಪ್‌ ಸಂಸ್ಥೆಯೊಂದು ನಾಂದಿ ಹಾಡಿದೆ.

ಬೆಳಗ್ಗಿನ ತಿಂಡಿ, ಕಾಫಿ, ಅರ್ಧ ದಿನದ ಕೆಲಸ ತೊರೆದು ಬ್ಯಾಂಕ್‌ಗಳ ಮುಂದೆ ಸಾಲಿನಲ್ಲಿ ನಿಲ್ಲುವುದು ಬೇಕಿಲ್ಲ. ‘ಬುಕ್‌ ಮೈ ಚೋಟು’ ಸಂಸ್ಥೆಗೆ ತಿಳಿಸಿ, ಗಂಟೆಗೆ ₹90 ನೀಡಿದರೆ ಸಾಕು. ನಿಮ್ಮ ಪರವಾಗಿ ಸಹಾಯಕರೊಬ್ಬರು ಸಾಲಿನಲ್ಲಿ ಹಾಜರಿರುತ್ತಾರೆ.

ಸಮಯವೇ ದುಡ್ಡು: ದೆಹಲಿ ಮೂಲದ ಬುಕ್‌ ಮೈ ಚೋಟು(bookmychotu) ಸ್ಟಾರ್ಟ್‌ಅಪ್‌ ಸಂಸ್ಥೆಯು ಗಂಟೆಗಳ ಲೆಕ್ಕಾಚಾರದಲ್ಲಿ ಸಹಾಯಕರನ್ನು ಒದಗಿಸುತ್ತಿದೆ. ಈ ಸಹಾಯಕರು ಸಾಲಿನಲ್ಲಿ ನಿಲ್ಲುತ್ತಾರೆಯೇ ಹೊರತು ಬ್ಯಾಂಕ್‌ ಅಥವಾ ಎಟಿಎಂ ಒಳಗೆ ಗ್ರಾಹಕರ ಪರವಾಗಿ ವ್ಯವಹಾರ ನಡೆಸುವುದಿಲ್ಲ.

ಪ್ರಸ್ತುತ ದೆಹಲಿ, ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಬುಕ್‌ಮೈಚೋಟು ಮೂಲಕ ಸಹಾಯಕರನ್ನು ಪಡೆಯಬಹುದಾಗಿದೆ. ಹೆಸರಿನಲ್ಲಿ ‘ಚೋಟು’ ಎಂದಿದ್ದರೂ 18 ವರ್ಷ ಮೇಲ್ಪಟ್ಟವರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಸೂಚನೆಯನ್ನೂ ಸಂಸ್ಥೆ ನೀಡಿದೆ.

Comments are closed.