ಬಿಗ್‌ಬಾಸ್ ಮನೆಯಿಂದ ಈ ವಾರ ಔಟ್ ಆಗಿದ್ದು ನಟಿ ಕಾರುಣ್ಯ ರಾಮ್. ಪ್ರತಿ ವಾರ ಪ್ರಥಮ್ ಹೆಸರನ್ನ ನಾಮಿನೇಟ್ ಮಾಡುತ್ತಿದ್ದ ಮನೆಯ ಸದಸ್ಯರು ಈ ವಾರ ಪ್ರಥಮ್ ಹೆಸರನ್ನ ತೆಗೆದುಕೊಳ್ಳದೇ ಮಾಳವಿಕಾ, ಕಾರುಣ್ಯ, ಮೋಹನ್ ಮತ್ತು ಭುವನ್‌ರನ್ನ ನಾಮಿನೇಟ್ ಮಾಡಿದ್ದರು. ಆದರೆ ಮನೆಯ ಕ್ಯಾಪ್ಟನ್ ನಿರಂಜನ್‌ಗೆ ನೀಡಿದ ವಿಶೇಷ ಅಧಿಕಾರದಿಂದಾಗಿ ಪ್ರಥಮ್ ನೇರವಾಗಿ ನಾಮಿನೇಟ್ ಆಗಿದ್ದರು. ಆದರೆ ಈ ವಾರವೂ ಪ್ರಥಮ್ ಸೇಫ್ ಆಗಿದ್ದಾರೆ.
ಈ ಐದು ಜನರಲ್ಲಿ ಈ ವಾರ ಕಾರುಣ್ಯ ಬಿಗ್‌ಬಾಸ್ ಮನೆಗೆ ವಿದಾಯ ಹೇಳಿದರು. ಮನೆಯಿಂದ ಎಲಿಮಿನೇಟ್ ಆದ ಕಾರುಣ್ಯಗೆ ಬಿಗ್‌ಬಾಸ್ ವಿಶೇಷ ಅಧಿಕಾರವೊಂದನ್ನ ನೀಡಿದರು. ಇದರ ಪ್ರಕಾರ ಬಿಗ್‌ಬಾಸ್ ಮುಂದಿನ ಆದೇಶದವರೆಗೆ ಮನೆಯ ಪಾತ್ರೆಯನ್ನು ತೊಳೆಯುವ ಜವಾಬ್ದಾರಿಯನ್ನು ಮನೆಯ ಒಬ್ಬ ಸದಸ್ಯರಿಗೆ ನೀಡಬೇಕಿತ್ತು. ಆಗ ಸಂಜನಾ ಹೆಸರನ್ನು ಸೂಚಿಸಿದ ಕಾರುಣ್ಯ, ಮನೆಯ ಪಾತ್ರೆಗಳನ್ನ ತೊಳೆಯುವ ಜವಾಬ್ದಾರಿಯನ್ನ ಅವರ ಹೆಗಲಿಗೇರಿಸಿದರು.