ಅಂತರಾಷ್ಟ್ರೀಯ

8 ಭಾರತೀಯ ಮೀನುಗಾರಿಕಾ ದೋಣಿಗಳನ್ನು ವಶಕ್ಕೆ ಪಡೆದಿದ ಪಾಕಿಸ್ತಾನ ಸೇನೆ

Pinterest LinkedIn Tumblr

boats

ಅಹ್ಮದಾಬಾದ್: ಪಾಕಿಸ್ತಾನದ ಕರಾವಳಿ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 8 ಭಾರತೀಯ ಮೀನುಗಾರಿಕಾ ದೋಣಿಗಳನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ನೌಕಾಪಡೆ (ಪಾಕಿಸ್ತಾನ ಮರಿಟೈಮ್ ಸೆಕ್ಯೂರಿಟಿ ಏಜೆನ್ಸಿ-ಪಿಎಂಎಸ್ ಎ)ಯ ಯೋಧರು ಇಂದು ಬೆಳಗ್ಗೆ ಗುಜರಾತ್ ನ ವಿವಾದಿತ ಗಡಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ 8 ಮೀನುಗಾರಿಕಾ ಬೋಟ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ರಾಷ್ಟ್ರೀಯ ಮೀನುಗಾರರ ಒಕ್ಕೂಟ ಎನ್ ಎಫ್ ಎಫ್ ಸ್ಪಷ್ಟಪಡಿಸಿದ್ದು, 40 ಮಂದಿಯಿದ್ದ 8 ಮೀನುಗಾರಿಕಾ ಬೋಟ್ ಗಳನ್ನು ಪಾಕಿಸ್ತಾನ ವಶಕ್ಕೆ ಪಡೆದಿದೆ ಎಂದು ಹೇಳಿದೆ.

ಎನ್ ಎಫ್ ಎಫ್ ಕಾರ್ಯದರ್ಶಿ ಮನೀಷ್ ಲೊಧಾರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, 8 ಬೋಟ್ ಗಳಲ್ಲಿ 40ಕ್ಕೂ ಅಧಿಕ ಮಂದಿ ಮೀನುಗಾರರು ಇದ್ದರು ಎಂದು ಮಾಹಿತಿ ನೀಡಿದ್ದಾರೆ. ಈ ಪೈಕಿ ಗುಜರಾತ್ ನ ಪೋರ್ ಬಂದರ್ ಗೆ ಸೇರಿದೆ 7 ಮಂದಿ ಮೀನುಗಾರರೂ ಇದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನು ಪಾಕಿಸ್ತಾನ ಸೇನೆ ಎಷ್ಟು ಮಂದಿ ಮೀನುಗಾರರನ್ನು ವಶಕ್ಕೆ ಪಡೆದಿದೆ ಎಂದು ಇನ್ನಷ್ಟೇ ಮಾಹಿತಿ ಬರಬೇಕಿದೆ ಎಂದು ಅವರು ಹೇಳಿದರು.

Comments are closed.