ರಾಷ್ಟ್ರೀಯ

ಸೆಲ್ಫಿಗಾಗಿ ಅತಿ ಹೆಚ್ಚು ಮಂದಿ ಪ್ರಾಣತೆತ್ತಿರುವ ಮೊದಲ ದೇಶ ಭಾರತ !

Pinterest LinkedIn Tumblr

selfi

ನವದೆಹಲಿ: ಇತ್ತೀಚೆಗೆ ಸೆಲ್ಫಿ ಹುಚ್ಚಿಗೆ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಈ ಸೆಲ್ಫಿ ವ್ಯಾಮೋಹ ದಿಂದಾಗಿ ಭಾರತ ಜಾಗತಿಕವಾಗಿ ಕುಖ್ಯಾತಿ ಪಡೆದುಕೊಂಡಿದೆ. ವಿಶ್ವದಲ್ಲೇ ಭಾರತವು ಸೆಲ್ಫಿಗಾಗಿ ಅತಿ ಹೆಚ್ಚು ಮಂದಿ ಪ್ರಾಣತೆತ್ತಿರುವ ಮೊದಲ ದೇಶವಾಗಿದೆ. ಎರಡನೇ ಸ್ಥಾನವನ್ನು ಪಾಕಿಸ್ತಾನ ಪಡೆದುಕೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕಳೆದ 2 ವರ್ಷಗಳಲ್ಲಿ ಭಾರತದಲ್ಲಿ ಸೆಲ್ಫಿà ಗಾಗಿ 127 ಮಂದಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನ 9, ಅಮೆರಿಕ 8, ರಷ್ಯಾದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಆದರೆ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಚೀನಾದಲ್ಲಿ ಕೇವಲ 4 ಮಂದಿ ಸೆಲ್ಫಿಗಾಗಿ ಬಲಿಯಾಗಿದ್ದಾರೆ ಎಂದು ಅಮೆರಿಕ ಮೂಲದ ಕಾರ್ನೇಜಿ ಮೆಲ್ಲನ್‌ ವಿವಿ ಹಾಗೂ ದಿಲ್ಲಿಯ ಇಂದ್ರಪ್ರಸ್ಥ ಇನ್ಸಿಟಿಟ್ಯೂಟ್‌ ಆಫ್ ಇನ್ಫರ್ಮೇಷನ್‌ ಟೆಕ್ನಾಲಜಿ ತಿಳಿಸಿದೆ.

“ಮಿ, ಮೈಸೆಲ್ಫ್ ಆ್ಯಂಡ್‌ ಕಿಲ್ಫಿ’ ಎಂಬ ಅಧ್ಯಯನವನ್ನು ನಡೆಸಲಾಗಿದ್ದು, ಕಳೆದ 2 ವರ್ಷದಲ್ಲಿ ಯುವಕರಲ್ಲಿ ಮೊಬೈಲ್‌ ಸೆಲ್ಫಿ ಹುಚ್ಚು ಹೆಚ್ಚಾಗಿದೆ ಎಂಬ ಅಂಶ ಇದರಲ್ಲಿ ವ್ಯಕ್ತವಾಗಿದೆ. 2014ರ ನಂತರ ಭಾರತದಲ್ಲಿ 127 ಜನ ಸಾವನ್ನಪ್ಪಿದ್ದನ್ನು ಅಂತರ್ಜಾಲದಲ್ಲಿ ವಿಶೇಷ ಶೋಧ ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಆಧರಿಸಿ ಅಧ್ಯಯನ ಖಚಿತಪಡಿಸಿಕೊಂಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸೆಲ್ಫಿಗೆ ಲೈಕ್‌ ಮತ್ತು ಹೆಚ್ಚೆಚ್ಚು ಕಮೆಂಟ್‌ ಬರುತ್ತವೆ. ಹೀಗಾಗಿ ಸೆಲ್ಫಿ ಹುಚ್ಚು ಯುವಕರಲ್ಲಿ ಹೆಚ್ಚು ಆವರಿಸಿದೆ. ಶಾರ್ಕ್‌ ದಾಳಿಗಿಂತ ಉಂಟಾದ ಸಾವಿಗಿಂತ ಇಂದು ಸೆಲ್ಫಿ ಸಾವು ಹೆಚ್ಚು ಎಂದು ಅದು ಹೇಳಿದೆ.

ಚಲಿಸುವ ರೈಲಿನ ಮುಂದೆ, ಅಪಾಯಕಾರಿ ಪ್ರಾಣಿಗಳ ಮುಂದೆ, ಗುಡ್ಡದ ತುತ್ತತುದಿಯಲ್ಲಿ- ಸೆಲ್ಫಿ ತೆಗೆಸಿಕೊಳ್ಳುವ ಖಯಾಲಿ ಯುವಕರಲ್ಲಿದೆ ಎಂದು ಅದು ವಿವರಿಸಿದೆ.

Comments are closed.