ಮುಂಬೈ: ನ.18 ರಂದು ಬಾಲಿವುಡ್ನ ಸೂಪರ್ ಸ್ಟಾರ್, ಎಲ್ಲರ ಭಾಯಿಜಾನ್ ಸಲ್ಮಾನ್ ಖಾನ್ ಮದುವೆ ಸಮಾರಂಭ ನಡೆಯಬೇಕಿತ್ತು.
ಕನ್ ಫ್ಯೂಸ್ ಆದ್ರಾ. ಹಾಗಾದ್ರೆ ಕೇಳಿ. ನಿಮ್ಮ ಮೆಮೋರಿಯನ್ನು ಸ್ವಲ್ಪ ರಿವೈಂಡ್ ಮಾಡಿಕೊಳ್ಳಿ. ಜುಲೈ ತಿಂಗಳಲ್ಲಿ ಖುದ್ದು ಸಲ್ಮಾನ್ ಖಾನ್ ನವೆಂಬರ್ 18ರಂದು ಮದುವೆ ಆಗುತ್ತೇನೆ ಎಂದು ಹೇಳಿದ್ದರು. ಟೆನಿಸ್ ತಾರೆ ಸಾನಿಯಾ ಮಿರ್ಜಾರ ಆಟೋಬಯೋಗ್ರಾಫಿ ಬಿಡುಗಡೆಯ ಸಮಾರಂಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾನಿಯಾ ಮಿರ್ಜಾ ನೀವು ಯಾವಾಗ ಮದುವೆ ಆಗುತ್ತೀರಿ ಎಂದು ಕೇಳಿದ್ದಕ್ಕೆ ಆಗ ಸಲ್ಮಾನ್ ನವೆಂಬರ್ 18ರಂದು ಎಂದು ಹೇಳಿ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದರು.
ಅಂದು ಸಲ್ಮಾನ್ ಖಾನ್ ತಮ್ಮ ಮದುವೆಯ ದಿನಾಂಕವನ್ನು ತಿಳಿಸಿದ ಕಾರಣ ಇಂದು ಮದುವೆ ನಡೆಯಬೇಕಿತ್ತು. ಆದರೆ ಮದುವೆಯ ಯಾವುದೇ ಸುದ್ದಿಯೇ ಇಲ್ಲ. ತನ್ನ ಮದುವೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಲ್ಮಾನ್ ಖಾನ್, ಹೌದು. ಇವತ್ತು ನವೆಂಬರ್ 18, 20ನೇ ತಾರೀಕಿನಿಂದ 25 ರೊಳಗೆ ನನ್ನ ಮದುವೆ ನಡೆಯಲಿದ್ದು, ಆದರೆ ಯಾವ ವರ್ಷ ಅನ್ನೋದು ಗೊತ್ತಿಲ್ಲಾ ಎಂದು ಹೇಳುವ ಮೂಲಕ ತನ್ನ ಮದುವೆಯ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಸಲ್ಮಾನ್ ತಂದೆ ಸಲೀಮ್ ಖಾನ್ ತಾಯಿ ಸಲ್ಮಾ ಅವರನ್ನು ನವೆಂಬರ್ 18ರಂದು ಮದುವೆಯಾಗಿದ್ದರು. ಅಷ್ಟೇ ಅಲ್ಲದೇ ಸಹೋದರಿ ಅರ್ಪಿತಾ ಖಾನ್ ಕೂಡ ಎರಡು ವರ್ಷಗಳ ಹಿಂದೆ ನವೆಂಬರ್ 18 ರಂದೇ ಮದುವೆಯಾಗಿದ್ದರು.
Comments are closed.