ಮನೋರಂಜನೆ

ಕಪ್ಪು ಹಣ ತಡೆಗೆ ತಕ್ಕ ಉತ್ತರ: ಅಮಿತಾಭ್‌ ಬಚ್ಚನ್‌

Pinterest LinkedIn Tumblr

amitabhbachchanಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆ ತಡೆ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಧ್ಯರಾತ್ರಿಯಿಂದ ₹500 ಮತ್ತು ₹1,000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿ ಅಚ್ಚರಿಯ ನಿರ್ಧಾರ ಕೈಗೊಂಡಿರುವುದಕ್ಕೆ ಬಾಲಿವುಡ್‌ನ ನಟನಟಿಯರು ಟ್ವೀಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಅಮಿತಾಭ್‌ ಬಚ್ಚನ್‌
ಗುರುವಾರದಿಂದ ಚಲಾವಣೆಗೆ ಬರಲಿರುವ ₹2000 ಮುಖಬೆಲೆಯ ನೋಟಿನ ಬಣ್ಣ ‘ಪಿಂಕ್‌’ (ತಾವು ಅಭಿನಯದ ಸಿನಿಮಾದ ಹೆಸರನ್ನು ಮಾರ್ಮಿಕವಾಗಿ ತಿಳಿಸುತ್ತಾ). ಇದು ‘ಪಿಂಕ್‌’ ಪರಿಣಾಮ ಎಂದಿದ್ದಾರೆ.

ಕರಣ್‌ ಜೋಹರ್‌
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿಜವಾದ ‘ಮಾಸ್ಟರ್‌ಸ್ಟ್ರೋಕ್‌ ಮೂವ್‌’ ಇದಾಗಿದೆ. ಕ್ರೀಡಾಂಗಣದ ಹೊರಗೆ ಚೆಂಡನ್ನು ಬಾರಿಸಿದ್ದಾರೆ.

ರಿಷಿ ಕಪೂರ್
ಪಿಎಂ ಮೋದಿ ಜೀ, ಚೆಂಡು ಕ್ರೀಡಾಂಗಣದಿಂದ ಹೊರಹೋಗಿದೆ. ಕಾಳಧನ ಸಂಗ್ರಹಗಾರರಿಗೆ ತಕ್ಕ ಉತ್ತರ.

ಅನುರಾಗ್‌ ಕಶ್ಯಪ್‌
ಕಪ್ಪು ಹಣ ನಿಯಂತ್ರಣಕ್ಕೆ ಸರಿಯಾದ ದಾರಿ

ದಿಯಾ ಮಿರ್ಜಾ
ಇದೊಂದು ಅದ್ಭುತ ನಡೆ. ದೇಶದಲ್ಲಿ ಭ್ರಷ್ಟಾಚಾರ ತಡೆಯುವ ಪ್ರಧಾನ ಮಂತ್ರಿ ಅವರ ಈ ನಿಲುವನ್ನು ಗೌರವಿಸುತ್ತೇನೆ.

ಭೂಮಿ ಫಡ್ನೇಕರ್‌
ಈ ನಿರ್ಧಾರದಿಂದ ಪ್ರಧಾನಿ ಅವರು ಮೇಧಾವಿ ಎಂಬುದು ತಿಳಿಯುತ್ತದೆ. ನಿಧಾನವಾಗಿ ಭಷ್ಟಾಚಾರವನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ಇನ್ನುಮುಂದೆ ಕಾಳಧನ ಇರುವುದಿಲ್ಲ.

ವಿಶಾಲ್‌ ದಾದ್ಲಾನಿ
ಕಪ್ಪುಹಣವನ್ನು ಗಂಭೀರವಾಗಿ ತೊಲಗಿಸುವಲ್ಲಿ ಇದು ಮೊದಲ ಮೆಟ್ಟಿಲು. ಅಲ್ಲದೇ ಎಲ್ಲಾ ರಾಜಕೀಯ ಪಕ್ಷಗಳು, ಧಾರ್ಮಿಕ ಮುಖಂಡರೂ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಬರುವಂತೆ ಮಾಡಬೇಕು.

Comments are closed.