ನವದೆಹಲಿ (ನ.10): 500 ಹಾಗೂ 1000 ರೂ. ಮುಖಬೆಲೆಯ ನೋಟಿನ ರದ್ದು ದಿಡೀರ್ ಬೆಳವಣಿಗೆ ಇಡೀ ದೇಶಕ್ಕೆ ಶಾಕ್ ನೀಡಿದರೆ ಕಪ್ಪುಹಣ ಹೊಂದಿದವರಿಗೆ ನಡುಕ ಹುಟ್ಟಿಸಿದೆ.
ಮೋದಿ ಮಾಸ್ಟರ್ ಸ್ಟ್ರೋಕ್ ಗೆ ಪ್ರಧಾನಿ ನರೇಂದ್ರ ಮೋದಿ ಆರು ತಿಂಗಳಿಂದ ಆರ್ಥಿಕ ಸಲಹೆಗಾರರ ಜೊತೆ ಸೇರಿ ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಈ ವಿಚಾರ ಕೊನೆ ಕ್ಷಣದವರೆಗೆ ವಿತ್ತ ಸಚಿವ ಅರುಣ್ ಜೇಟ್ಲಿ, ಆರ್ ಬಿಐ ಗವರ್ನರ್ ಮತ್ತು ಕೆಲವು ನಂಬಿಕಸ್ಥ ಅಧಿಕಾರಿಗಳಿಗೆ ಮಾತ್ರ ತಿಳಿದಿತ್ತು.
ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಈ ವಿಚಾರವನ್ನು ಹೇಳುವ ಕೆಲವೇ ಕ್ಷಣಗಳ ಮುನ್ನ ಸಂಪುಟ ಸಭೆಯಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಿದ್ದರು. ಮೋದಿ ತಮ್ಮ ಭಾಷಣ ಮುಗಿಸುವವರೆಗೆ ಸಂಪುಟದ ಹೊರಗೆ ಯಾರನ್ನೂ ಹೊರಬಿಟ್ಟಿರಲಿಲ್ಲ.
“ಒಂದು ವೇಳೆ ಗೌಪ್ಯತೆ ಕಾಪಾಡುವಲ್ಲಿ ವಿಫಲರಾಗಿದ್ದರೆ ಜನರು ಚಿನ್ನ, ರಿಯಲ್ ಎಸ್ಟೇಟ್ ನಲ್ಲಿ ಹವಾಲಾ ಹಣವನ್ನು ಹೂಡಿಕೆ ಮಾಡುತ್ತಿದ್ದರು. ಆದರೆ ಹಾಗಾಗಲಿಲ್ಲ. ನಾವು ಕೊನೆ ಕ್ಷಣದವರೆಗೆ ಸುಳಿವು ನೀಡಲಿಲ್ಲ” ಎಂದು ಮೂಲಗಳು ತಿಳಿಸಿವೆ.