ಕರ್ನಾಟಕ

ಸಚಿವರು ನಗ್ನ ಚಿತ್ರ ವೀಕ್ಷಿಸಿದ್ದು ತಪ್ಪಲ್ಲ: ದಿನೇಶ್​ ಗುಂಡೂರಾವ್​

Pinterest LinkedIn Tumblr

dineshgunduraoರಾಯಚೂರು(ನ.10): ಟಿಪ್ಪು ಜಯಂತಿ ಆಚರಣೆ ವೇಳೆಯೇ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ರಿಂದ ಅರೆನಗ್ನ ಚಿತ್ರ ವೀಕ್ಷಣೆ ಮಾಡಿಲ್ಲ. 5 ಸೆಕೆಂಡ್ ಅಷ್ಟೇ ಯಾವೋದೋ ಚಿತ್ರ ನೋಡಿದ್ದಾರಷ್ಟೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಚಿವರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಜಯಂತಿ ವೇಳೆ ವೇದಿಕೆ ಮೇಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ 5 ಸೆಕೆಂಡ್ ಅಷ್ಟೇ ಯಾವೋದೋ ಚಿತ್ರ ನೋಡಿದ್ದಾರಷ್ಟೇ ಅದು ತಪ್ಪಲ್ಲ. ಯಾರೋ ವಾಟ್ಸ್ಌಪ್ನಲ್ಲಿ ಕಳುಹಿಸಿದ್ದು ನೋಡಿದ್ದಾರೆ ಅದನ್ನು ದೊಡ್ಡದು ಮಾಡ ಬೇಡಿ, ಗ್ರೂಪ್ನಲ್ಲಿ ಬಂದ ಚಿತ್ರಗಳನ್ನು ಸುಮ್ಮನೆ ನೋಡಿದ್ದಾರೆ ಅಷ್ಟೇ ಎಂದು ಸೇಠ್ ಅವರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅಶ್ಲೀಲ ಚಿತ್ರ ನೋಡಿದ ತಕ್ಷಣ ಎಚ್ಚೆತ್ತುಕೊಂಡು ವಾಟ್ಸಪ್’ನಿಂದ ಹೊರ ಬಂದಿದ್ದಾರೆ, ಅವರೇನೂ ಬಿಜೆಪಿಯವರಂತೆ ಜೂಮ್ ಮಾಡಿ ನೋಡಿಲ್ಲ. ಅವರೇನೂ ಪರಾರಿಯಾಗುವ ವ್ಯಕ್ತಿಯಲ್ಲ, ನಿಮ್ಮ ಉತ್ತರಿಸುತ್ತಾರೆ ಎಂದು ಸುವರ್ಣನ್ಯೂಸ್ಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.