ಅಂತರಾಷ್ಟ್ರೀಯ

ಟ್ರಂಪ್ ಗೆಲುವು ವಿರೋಧಿಸಿ ಅಮೆರಿಕದಾದ್ಯಂತ ಭುಗಿಲೆದ್ದ ಪ್ರತಿಭಟನೆ

Pinterest LinkedIn Tumblr

donald_trumpನ್ಯೂಯಾರ್ಕ್(ನ.10): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಬೆನ್ನಲ್ಲೇ ನಿಯೋಜಿತ ಅಧ್ಯಕ್ಷರ ವಿರುದ್ಧವೇ ಅಮೆರಿಕದ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ.
ಜನರು ಗುಂಪು ಗುಂಪಾಗಿ ನೆರೆದು ಟ್ರಂಪ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆ ನಡೆಸಿರುವ ಪ್ರತಿಭಟನಕಾರರು, ಟೈರ್’ಗಳಿಗೆ ಬೆಂಕಿ ಹಚ್ಚಿ ‘ನನ್ನ (ಟ್ರಂಪ್) ಅಧ್ಯಕ್ಷನಲ್ಲ’ ಮತ್ತು ‘ಅಮೆರಿಕ ಫ್ಯಾಸಿಸ್ಟ್ ಅಲ್ಲ’ ಎಂದು ಘೋಷಣೆಗಳನ್ನು ಪ್ರತಿಭಟನಕಾರರು ಕೂಗಿದ್ದಾರೆ. ನ್ಯೂಯಾರ್ಕ್‌ನಲ್ಲಿ ಪ್ರತಿಭಟನೆಗೆ ಸಂಬಂಧಿಸಿದಂತೆ ಈಗಾಗಲೇ 15 ಮಂದಿಯನ್ನು ಬಂಧಿಸಲಾಗಿದೆ.
ನ್ಯೂಯಾರ್ಕ್, ಚಿಕಾಗೊ, ಫಿಲಡೆಲಿಯಾ, ಬೋಸ್ಟನ್, ಕ್ಯಾಲಿಫೋರ್ನಿಯಾ, ಕೊಲೊರಾಡೊ, ಸಿಯಾಟಲ್, ಲಾಸ್ ಏಂಜಲೀಸ್, ಪೋರ್ಟ್‌ಲ್ಯಾಂಡ್, ಅಟ್ಲಾಂಟ, ಆಸ್ಟಿನ್, ಡೆನ್ವರ್, ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಇತರ ನಗರಗಳಲ್ಲಿ ಟ್ರಂಪ್ ವಿರುದ್ಧ ಪ್ರತಿಭಟನೆ ನಡೆದಿದೆ. ನಗರಗಳ ರಸ್ತೆಗಳಲ್ಲಿ ಪ್ರತಿಭಟನಕಾರರು ವಿವಿಧ ಪ್ರತಿಭಟನಾತ್ಮಕ ಬರಹಗಳುಳ್ಳ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ‘ದ್ವೇಷ ಬೇಡವೇ ಬೇಡ’ ‘ಟ್ರಂಪ್ ನಮ್ಮ ಅಧ್ಯಕ್ಷನಲ್ಲ’ ಮುಂತಾದ ಭಿತ್ತಿ ಪತ್ರಗಳೊಂದಿಗೆ ಪ್ರತಿಭಟನಕಾರರು ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Comments are closed.