ಮನೋರಂಜನೆ

ನೋಟ್ ಬ್ಯಾನ್ ಮಾಡಿದ ಮೋದಿಯನ್ನು ಹೊಗಳಿದ ರಜನಿಕಾಂತ್ ! ಬೇರೆ ಯಾರು ಏನು ಹೇಳಿದ್ದಾರೆ ನೋಡಿ…

Pinterest LinkedIn Tumblr

modi-rajani

ನವದೆಹಲಿ: ಇನ್ನು ಮುಂದೆ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಗೆ ಇಲ್ಲ ಎಂದು ಪ್ರಧಾನಿ ಮೋದಿ ಘೋಷಿಸಿರುವ ಕ್ರಮವನ್ನು ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಖ್ಯಾತ ನಟ, ನಟಿಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಖ್ಯಾತ ನಟ ರಜನಿಕಾಂತ್ ಟ್ವೀಟ್ ಮಾಡಿ, ಹ್ಯಾಟ್ಸ್ ಆಫ್ ನರೇಂದ್ರ ಮೋದಿ ಜಿ. ಹೊಸ ಭಾರತದ ಉದಯವಾಗಿದೆ, ಜೈ ಹಿಂದ್ ಎಂದು ಬರೆದಿದ್ದಾರೆ.

ಇನ್ನು ಋಷಿ ಕಪೂರ್, ಮೋದಿಯವರೇ, ಬಾಲು ಸ್ಟೇಡಿಯಂ ಹೊರಗಿದೆ, ನೋಟು ಚಲಾವಣೆ ರದ್ದು ಮಾಡುವುದು ಸರಿಯಾದ ಉತ್ತರ, ಧನ್ಯವಾದಗಳು ಎಂದಿದ್ದಾರೆ.

ನಟಿ ಅನುಷ್ಕಾ ಶರ್ಮ ಟ್ವೀಟ್ ಮಾಡಿ, ಮೋದಿಯವರ ಈ ನಿರ್ಧಾರಕ್ಕೆ ಭಾರತೀಯರಾದ ನಾವೆಲ್ಲಾ ಸಹಕರಿಸಬೇಕು ಎಂದಿದ್ದಾರೆ.

ನಟ ಪ್ರಕಾಶ್ ರೈ ಟ್ವೀಟ್ ಮಾಡಿ, ಆತಂಕಪಡುವ ಅಗತ್ಯವಿಲ್ಲ, ನಿಮ್ಮ ಬಳಿ 500, 1000ದ ನೋಟು ಇದ್ದರೆ ಬ್ಯಾಂಕಿಗೆ ಹೋಗಿ ಬದಲಾಯಿಸಿಕೊಳ್ಳಿ, ಕಪ್ಪು ಹಣ ಇಟ್ಟುಕೊಂಡಿರುವವರಿಗೆ ಮಾತ್ರ ತೊಂದರೆಯಾಗುತ್ತದೆ.

ನಟ ಅರ್ಜುನ್ ಕಪೂರ್ ವಿಭಿನ್ನವಾಗಿ ಟ್ವೀಟ್ ಮಾಡಿದ್ದಾರೆ, ಕಪ್ಪು ಹಣದ ಹಾವಳಿಯನ್ನು ತಡೆಗಟ್ಟಲು ಉತ್ತಮ ನಿರ್ಧಾರವೇ, ಆದರೆ ಈ ಮಧ್ಯೆ ಮೂಲ ಸೌಕರ್ಯ ಮತ್ತು ಇತರ ವಿಷಯಗಳಿಗೂ ಪ್ರಾಮುಖ್ಯತೆ ಕೊಡಬೇಕು, ಪ್ರಧಾನಿಯವರ ಈ ಕ್ರಮ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದಿದ್ದಾರೆ.

Comments are closed.