ರಾಷ್ಟ್ರೀಯ

ಹೊಸ ₹ 2,000 ನೋಟುಗಳಲ್ಲಿ ನ್ಯಾನೊ ಜಿಪಿಎಸ್‌ ಚಿಪ್‌ ಇಲ್ಲ…ಸುಳ್ಳು ಸುದ್ದಿ: ಆರ್‌ಬಿಐ ಸ್ಪಷ್ಟನೆ

Pinterest LinkedIn Tumblr

note1

ನವದೆಹಲಿ:ನೂತನವಾಗಿ ಬಿಡುಗಡೆಯಾಗಲಿರುವ 2000 ರೂಪಾಯಿ ನೋಟುಗಳಲ್ಲಿ ಜಿಪಿಎಸ್ ಚಿಪ್ ಅಳವಡಿಸಲಾಗಿದೆ ಎಂಬ ಸುದ್ದಿಯನ್ನು ಆರ್ ಬಿಐ ತಳ್ಳಿಹಾಕಿದೆ.

ಕಾಳಧನ ಚಲಾವಣೆಯನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ 2000 ರೂಪಾಯಿ ನೋಟುಗಳಲ್ಲಿ ಜಿಪಿಎಸ್ ಚಿಪ್ ಅನ್ನು ಅಳವಡಿಸಲಾಗಿದೆ ಎಂಬ ಸುದ್ದಿ ಈ ಮೊದಲು ಪ್ರಕಟವಾಗಿತ್ತು.

ಸದ್ಯ ವಿಶ್ವದಾದ್ಯಂತ ಇಂತಹ ತಂತ್ರಜ್ಞಾನ ಎಲ್ಲಿಯೂ ಅಳವಡಿಕೆಯಾಗಿಲ್ಲ. ಹಾಗಿದ್ದ ಮೇಲೆ ನಾವು ಹೇಗೆ ಜಿಪಿಎಸ್ ಚಿಪ್ ಅಳವಡಿಸಲು ಸಾಧ್ಯ ಎಂದು ಸ್ವತಃ ಆರ್ ಬಿಐ ವಕ್ತಾರ ಅಪ್ಲಾನಾ ಕಿಲ್ಲಾವಾಲಾ ನ್ಯೂಸ್ 18 ಜೊತೆ ಮಾತನಾಡುತ್ತ ಪ್ರಶ್ನಿಸಿದ್ದಾರೆ.

ನೂತನ ತಂತ್ರಜ್ಞಾನ ಹೊಂದಿರುವ ಹೊಸ 500 ಹಾಗೂ 2000 ರೂಪಾಯಿ ನೋಟುಗಳು ಶುಕ್ರವಾರದಿಂದ(ನವೆಂಬರ್ 11) ಎಟಿಎಂಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ವಿತ್ತ ಕಾರ್ಯದರ್ಶಿ ಅಶೋಕ್ ಲಾವಾಸ್ ತಿಳಿಸಿದ್ದಾರೆ.

ನವೆಂಬರ್ 10ರಂದು 500, 2000 ಸಾವಿರ ರೂಪಾಯಿ ನೋಟು ಬಿಡುಗಡೆಯಾಗಲಿದೆ. 2000 ರೂಪಾಯಿ ನೋಟು ಒಂದು ಬದಿ ಗಾಂಧೀಜಿ ಚಿತ್ರ, ಇನ್ನೊಂದೆಡೆ ಮಂಗಳಯಾನ ಚಿತ್ರ, ಮೆಜೆಂತಾ ಬಣ್ಣ ಹೊಂದಿರಲಿದೆ.

Comments are closed.