ಗಲ್ಫ್

ನವೆಂಬರ್ 14 ರಂದು ಯುಎಇಯ ಆಕಾಶದಲ್ಲಿ ಕಾಣಲಿದೆ ‘ಪೂರ್ಣಚಂದ್ರ’

Pinterest LinkedIn Tumblr

super-moon

ದುಬೈ: ನವೆಂಬರ್ 14ಕ್ಕೆ ಯುಎಇಯ ಆಕಾಶದಲ್ಲಿ ಪೂರ್ಣಚಂದ್ರನ ದೊಡ್ಡ ಗಾತ್ರ ದರ್ಶನವಾಗಲಿದೆ ಎಂದು ವರದಿಯೊಂದು ತಿಳಿಸಿದೆ.

ಭೂಮಿಯೊಂದಿಗೆ ಹೆಚ್ಚು ನಿಕಟವಾಗಿರುವ ಚಂದ್ರನನ್ನು ಅಂದು ದರ್ಶಿಸಲು ಸಾಧ್ಯವಿದ್ದು, ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪೂರ್ಣ ಚಂದ್ರನಿಗಿಂತ ಶೇ.14ರಷ್ಟು ದೊಡ್ಡ ಗಾತ್ರದ ಚಂದ್ರ(ಸೂಪರ್ ಮೂನ್) ಅಂದುಕಾಣಸಿಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಯುಎಇ ಚಂದ್ರ ದರ್ಶನಕ್ಕೆ ಸೂಕ್ತ ಸ್ಥಳವೆಂದಿರುವ ವಿಜ್ಞಾನಿಗಳು ನವೆಂಬರ್ ಹದಿನಾಲ್ಕರಂದು ಬೆಳಗ್ಗೆ 5:50 ಗಂಟೆಯ ಸಮಯದಲ್ಲಿ ಅದು ದರ್ಶನವಾಗಲಿದೆ ಎಂದು ತಿಳಿಸಿದ್ದಾರೆ.

ಸುಮಾರು 70ವರ್ಷಗಳ ಬಳಿಕ ಇಷ್ಟು ದೊಡ್ಡ ಗಾತ್ರದ ಚಂದ್ರದರ್ಶನವಾಗಲಿದೆ. ಈ ಸಲ ಇದನ್ನು ನೋಡಲು ಸಾಧ್ಯವಾದವರು ಇನ್ನೊಮ್ಮೆ ಇದೇ ಪ್ರಮಾಣದ ಚಂದ್ರದರ್ಶನಕ್ಕಾಗಿ 2034 ನವೆಂಬರ್ 25ರವರೆಗೆ ಕಾದು ಕುಳಿತುಕೊಳ್ಳಬೇಕಾಗುತ್ತದೆ ಎಂದು ವರದಿ ತಿಳಿಸಿದೆ.

Comments are closed.