ಮನೋರಂಜನೆ

ಬಿಗ್‌ಬಾಸ್‌ ಮನೆಯಲ್ಲಿ ಒಳ್ಳೆಯ ಹುಡುಗನಿಗೆ ಕೆಟ್ಟ ದಿನವಾದ ‘ಶನಿ’ವಾರ ! ತೀವ್ರ ತರಾಟೆಗೆ ತೆಗೆದುಕೊಂಡ ಸುದೀಪ್

Pinterest LinkedIn Tumblr

pratham

ಬಿಗ್‌ಬಾಸ್‌ ಮನೆಯಲ್ಲಿ ಶನಿವಾರ ಒಳ್ಳೆಯ ಹುಡುಗ ಪ್ರಥಮ್’ಗೆ ಕೆಟ್ಟ ದಿನವಾಗಿತ್ತು. ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‌ನಲ್ಲಿ ಸುದೀಪ್ ಅವರು ಪ್ರಥಮ್’ನನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಬಿಗ್‌ಬಾಸ್‌ ಮನೆಯಲ್ಲಿ ಆಗುತ್ತಿರುವ ಗೊಂದಲಗಳು, ಕಿರಿಕಿರಿ, ಅಸಡ್ಡೆಯ ವರ್ತನೆ, ನಡೆದುಕೊಳ್ಳುವ ರೀತಿಯ ಕುರಿತು ಕಿಚ್ಚ ಸುದೀಪ್ ಅವರು ಪ್ರಥಮ್’ಗೆ ಕ್ಲಾಸ್ ತೆಗೆದುಕೊಂಡರು. ತಾವು ಮಾಡುದೆಲ್ಲ ಸರಿ..ಬೇರೆಯವರು ಮಾಡುವುದು ತಪ್ಪು ಎಂಬ ವರ್ತನೆಯನ್ನು ಕಟುವಾಗಿ ಖಂಡಿಸಿದ ಸುದೀಪ್, ಮುಂದೆ ಎಲ್ಲರೊಂದಿಗೆ ಸ್ಪರ್ಧಿಯ ರೀತಿಯಲ್ಲಿ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

big11

ನಿಜವಾದ ಕನ್ನಡಿಗ ಯಾರು ಮತ್ತು ಆ ಕನ್ನಡಿಗ ಯಾವ ರೀತಿ ಬದುಕುತ್ತಾನೆ ಎಂದು ಖಡಕ್ಕಾಗಿ ಪ್ರಥಮ್‌ಗೆ ಪಾಠ ಮಾಡಿದರು. ಇದರ ನಂತರ ಕುಂಕುಮದ ವಿಚಾರ ಕೈಗೆತ್ತಿಕೊಂಡ ಸುದೀಪ್‌, ಸ್ಪರ್ಶ ರೇಖಾ ಪರವಾಗಿ ಮಾತನಾಡಿ ಪ್ರಥಮ್‌ಗೆ ಒಳ್ಳೆಯ ಬುದ್ಧಿ ಹೇಳಿದರು.. ಒಟ್ಟಾರೆ ಎಪಿಸೋಡ್‌ನಲ್ಲಿ ಪ್ರಥಮ್‌ಗೆ ಕಿಚ್ಚ ಒಳ್ಳೆಯ ಕ್ಲಾಸ್‌ನ್ನೇ ತೆಗೆದುಕೊಂಡರು.

ಅಷ್ಟೇ ಅಲ್ಲದೆ ಸಂಜನಾ ಡ್ಯಾನ್ಸ್‌ಮಾಡುವ ವೇಳೆ ಪ್ರಥಮ್‌ಗೆ ಹೊಡೆದಿದ್ದರ ಬಗ್ಗೆ ಮಾತನಾಡಿದ ಸುದೀಪ್, ತಪ್ಪಿನ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಮನೆಯಲ್ಲಿ ಆ ತರಹ ವರ್ತಿಸುವುದು ಸರಿಯಲ್ಲ ಎಂದು ಮಾತಿನ ಚಾಟಿ ಬೀಸಿದರು.

ಬಿಗ್‌ಬಾಸ್‌ ಮನೆಯಲ್ಲಿ ಮೊಬೈಲ್ ಬಳಸುತ್ತಾರೆ ಎಂಬುದಕ್ಕೆ ಸ್ಪಷ್ಟನೆ !

ನಿರಂಜನ್‌ದೀಪಾವಳಿಯ ಸಂದರ್ಭದಲ್ಲಿ ಕಾರುಣ್ಯಗೆ ‘ಮೊಬೈಲ್‌ತೆಗೆದುಕೊಂಡು ಬಾ, ಸೆಲ್ಫಿ ತೆಗೆದುಕೊಳ್ಳೋಣ’ ಎಂದು ಹೇಳಿರುವ ಮಾತು ಪ್ರೇಕ್ಷಕರ ಮನಸ್ಸಿನಲ್ಲಿ ಗೊಂದಲ ಉಂಟುಮಾಡಿತ್ತು. ಇದೇ ಪ್ರಶ್ನೆಯನ್ನ ಕಾಲರ್‌ಆಫ್‌ದಿ ವೀಕ್‌ಆಗಿದ್ದ ಪುನೀತ್‌ಎಂಬವರು ನಿರಂಜನ್‌ಗೆ ಅದೇ ಪ್ರಶ್ನೆಯನ್ನ ಕೇಳಿದರು.

ಕಾಲರ್‌ಪ್ರಶ್ನೆಗೆ ಉತ್ತರಿಸಿದ ನಿರಂಜನ್‌ನಾವು ಸುಮ್ಮನೆ ಮಾತನಾಡುತ್ತಿರುತ್ತೇವೆ. ಬಹಳ ದಿನಗಳಿಂದ ಮೊಬೈಲ್‌ನ್ನೇ ನೋಡಿಲ್ಲವೆಂದು ಹೇಳಿದರು. ಇದೇ ಸಂದರ್ಭದಲ್ಲಿ ಕಿಚ್ಚ ಸಹ ಮಾತನಾಡಿ, ಬಿಗ್‌ಬಾಸ್‌ಮನೆಯ ಬಗ್ಗೆ ಮತ್ತು ಸ್ಪರ್ಧಿಗಳ ಬಗ್ಗೆ ಸಂಶಯ ಬೇಡವೆಂದು ಹೇಳಿದರು.

Comments are closed.