ಮುಂಬೈ: ಮರಾಠಿಯ ‘ವೆಂಟಿಲೇಟರ್’ ಸಿನಿಮಾದ ‘ಬಾಬಾ’ ಗೀತೆಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ದನಿಯಾಗಿದ್ದಾರೆ.
ಪ್ರಿಯಾಂಕಾ ಹಾಡಿರುವ ಮೊದಲ ಮರಾಠಿ ಹಾಡು ಇದಾಗಿದೆ. ಸುಮಾರು 4 ನಿಮಿಷಗಳ ಈ ಗೀತೆಗೆ ‘ಪಿಗ್ಗಿ’ ದನಿಯಾಗಿದ್ದಾರೆ.
ತಂದೆಯ ಕುರಿತಾದ ಗೀತೆ ಇದಾಗಿದ್ದು, ಈ ಹಾಡಿನ ವಿಡಿಯೊ ಈಗ ವೈರಲ್ ಆಗಿದೆ.
ನ.2ರಂದು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿರುವ ಈ ಹಾಡನ್ನು ಈವರೆಗೆ 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಈ ಹಾಡಿನ ವಿಡಿಯೊ ಟ್ವೀಟ್ ಮಾಡಿರುವ ಪ್ರಿಯಾಂಕಾ, ‘ಇದು ನನ್ನ ಮೊದಲ ಮರಾಠಿ ಗೀತೆ. ಏನಾದರೂ ತಪ್ಪುಗಳಾಗಿದ್ದರೆ ಕ್ಷಮಿಸಿ’ ಎಂದಿದ್ದಾರೆ.