ವಾರಣಾಸಿ: ಭಾರತದ ಕ್ರಿಕೆಟಿಗ ಇಶಾಂತ್ ಶರ್ಮಾ ಅವರು ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್ ಅವರೊಂದಿಗೆ ಡಿಸೆಂಬರ್ 9 ರಂದು ಸಪ್ತಪದಿ ತುಳಿಯಲ್ಲಿದ್ದಾರೆ.
ಜೂನ್ 19 ರಂದು ಇಶಾಂತ್ ಶರ್ಮಾ ಹಾಗೂ ಪ್ರತಿಮಾ ಸಿಂಗ್ ಅವರ ನಿಶ್ಚಿತಾರ್ಥ ನೆರವೇರಿದ್ದು, ಈ ಜೋಡಿ ಡಿಸೆಂಬರ್ 9 ರಂದು ಮದುವೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಾರಣಾಸಿ ಮೂಲದವರಾದ ಪ್ರತಿಮಾ ಸಿಂಗ್ ಏಷ್ಯನ್ ಗೇಮ್ಸ್ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಭಾರತದ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡದ ನಾಯಕಿ ಆಗಿದ್ದರು.
ಪ್ರತಿಮಾ ಸಿಂಗ್ ಅವರಿಗೆ ಐದು ಮಂದಿ ಸಹೋದರಿಯರಿದ್ದು, ಅವರೆಲ್ಲರೂ ಬ್ಯಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಸಮಾನ ಆಸಕ್ತಿಯನ್ನು ಹೊಂದಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಮಂಗಳವಾರ ದಶಾಶ್ವಮೇಧ ಘಾಟ್‌ನಲ್ಲಿ ನಡೆದ ಗಂಗಾ ಆರತಿ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿದ್ದರು.