ರಾಷ್ಟ್ರೀಯ

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿ

Pinterest LinkedIn Tumblr

riceನವದೆಹಲಿ: ಕೇರಳ ಮತ್ತು ತಮಿಳುನಾಡು ಸೇರಿದಂತೆ ದೇಶಾದ್ಯಂತ ಇದೇ ತಿಂಗಳಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಯಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 80 ಕೋಟಿ ಜನರು ಪ್ರಸ್ತುತ ಕಾಯ್ದೆಯ ಪ್ರಯೋಜನ ಪಡೆಯಲಿದ್ದಾರೆ.

ಕೇಂದ್ರ ಸರ್ಕಾರದಿಂದ ವಾರ್ಷಿಕ 1.4 ಲಕ್ಷ ಕೋಟಿ ಸಹಾಯ ಧನ ನಿಗದಿಯಾಗಿದ್ದು, 2016–17ನೇ ಸಾಲಿನಲ್ಲಿ ರಾಜ್ಯ ಸರ್ಕಾರಗಳಿಗೆ ಈವರೆಗೆ ₹1874 ಕೋಟಿ ಬಿಡುಗಡೆಯಾಗಿದೆ. ಕೇರಳ ಮತ್ತು ತಮಿಳು ನಾಡು ರಾಜ್ಯಗಳಲ್ಲಿ ಮಾತ್ರ ಆಹಾರ ಭದ್ರತಾ ಕಾಯ್ದೆ ಅನುಷ್ಠಾನಗೊಂಡಿರಲಿಲ್ಲ ಎಂದು ಆಹಾರ ಮತ್ತ ನಾಗರಿಕ ಪೂರೈಕೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ತಿಳಿಸಿದರು.

2013ರಲ್ಲಿ ಸಂಸತ್‌ ಈ ಕಾಯ್ದೆಗೆ ಅನುಮೋದನೆ ನೀಡಿತ್ತು. ಕಾಯ್ದೆ ಅಡಿ ಪ್ರತಿ ತಿಂಗಳು ಒಬ್ಬರಿಗೆ ಪ್ರತಿ ಕೆ.ಜಿ.ಗೆ ₹1–3 ದರದಲ್ಲಿ 5 ಕೆ.ಜಿ ಆಹಾರ ಧಾನ್ಯ ಪೂರೈಕೆಯಾಗಲಿದೆ.

Comments are closed.