ಮನೋರಂಜನೆ

ಕಾಲು ಕಳೆದುಕೊಂಡಿರುವ ಚಿತ್ರ ನಟ​ ಸತ್ಯಜಿತ್ ರ ಆರೋಗ್ಯ ವಿಚಾರಿಸಿದ ಸಿಎಂ ಸಿದ್ಧರಾಮಯ್ಯ

Pinterest LinkedIn Tumblr

cm

ಬೆಂಗಳೂರು: 2016ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ರಾಜ್ಯ ಸರ್ಕಾರದ ವತಿಯಿಂದ ಸಂತೋಷ ಕೂಟ ಏರ್ಪಡಿಸಲಾಗಿತ್ತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ, ಸಚಿವರಾದ ಕೆ.ಜೆ. ಜಾರ್ಜ್, ರೋಷನ್ ಬೇಗ್, ಉಮಾಶ್ರೀ, ಹಾಗೂ ಪ್ರಶಸ್ತಿ ವಿಜೇತರು ಪಾಲ್ಗೊಂಡಿದ್ದರು.

ವಿಜೇತರ ಪೈಕಿ ಹೆಚ್ಚು ಗಮನ ಸೆಳೆದಿದ್ದು, ಗ್ಯಾಂಗ್ರಿನ್ನಿಂದಾಗಿ ಕಾಲು ಕಳೆದುಕೊಂಡಿರುವ ಚಿತ್ರ ನಟ ಸೈಯ್ಯದ್ ಸತ್ಯಜಿತ್. ಸತ್ಯಜಿತ್ ಆರೋಗ್ಯ ವಿಚಾರಿಸಿದ ಸಿಎಂ ಸಿದ್ಧರಾಮಯ್ಯ, ಚಿಕಿತ್ಸಾ ವೆಚ್ಚ ಭರಿಸಿಕೊಡುವ ಭರವಸೆ ನೀಡಿದ್ರು. ಸತ್ಯಜಿತ್ ಅವರಿಗೆ ಚಿಕಿತ್ಸೆಗಾಗಿ ಹಣಕಾಸಿನ ತೊಂದರೆ ಉಂಟಾಗಿರುವ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು.

Comments are closed.