ಬೆಳಗಾವಿ : ಕರ್ನಾಟಕ ರಾಜ್ಯಾದ್ಯಂತ 61 ನೇ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಕರಾಳ ದಿನವನ್ನು ಆಚರಿಸಿ ಪುಂಡಾಟ ಮೆರೆದಿದ್ದು, ನಾಡ ದ್ರೋಹದ ಕಾರ್ಯದಲ್ಲಿ ಮೇಯರ್‌ಮತ್ತು ಉಪಮೆಯರ್‌ಪಾಲ್ಗೊಂಡಿದ್ದರು.
ಸಂಭಾಜಿ ಉದ್ಯಾನವನದಿಂದ ಹುತಾತ್ಮ ಚೌಕದ ವರೆಗೆ ನೂರಾರು ಎಂಇಎಸ್‌ಕಾರ್ಯಕರ್ತರು ಕಪ್ಪು ಭಾವುಟಗಳನ್ನು ಹಿಡಿದು, ಮುಖಕ್ಕೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೆರವಣಿಗೆ ನಡೆಸಿ ನಾಡ ದ್ರೋಹದ ಘೋಷಣೆಗಳನ್ನು ಕೂಗಿದರು. ಮೆರವಣಿಗೆಯಲ್ಲಿ ಮೇಯರ್‌ಸರಿತಾ ಪಾಟೀಲ್, ಉಪಮೇಯರ್‌ಸಂಜಯ್‌ಶಿಂಧೆ ಪಾಲ್ಗೊಂಡಿದ್ದರು.
ಮೇಯರ್‌ಮತ್ತು ಉಪಮೇಯರ್‌ವಿರುದ್ಧ ಕನ್ನಡ ಪರ ಸಂಘಟನೆಗಳು ಕಿಡಿಕಾರಿದ್ದು ಕೂಡಲೇ ಇಬ್ಬರನ್ನೂ ವಜಾ ಮಾಡಿ ಸದಸ್ಯತ್ವದಿಂದ ಅನರ್ಹ ಮಾಡುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎನ್‌ಜಯರಾಮು ಅವರು ಮೆರವಣಿಗೆಯ ವಿಡಿಯವೋ, ಭಾವಚಿತ್ರಗಳನ್ನು ಸಂಗ್ರಹಿಸಿ ಪರಿಶೀಲಿಸಿ ನಗರಾಭಿವೃದ್ದಿ ಇಲಾಖೆಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
2011 ರಲ್ಲೂ ಕರಾಳ ದಿನ ಆಚರಣೆ ಮಾಡಿದ್ದಕ್ಕಾಗಿ ಮಹಾನಗರ ಪಾಲಿಕೆಯನ್ನೇ ಸೂಪರ್‌ಸೀಡ್‌ಮಾಡಲಾಗಿತ್ತು. ಇದೀಗ ಮೇಯರ್‌ಮತ್ತು ಉಪಮೇಯರ್‌ಅನರ್ಹಗೊಳ್ಳುವ ಸಾಧ್ಯತೆಗಳಿವೆ.