ಕ್ರೀಡೆ

ಯುವರಾಜ್‌ ಸಿಂಗ್‌ ಡ್ರಗ್ಸ್‌ ಸೇವಿಸುತ್ತಾರೆ: ಗಂಭೀರ ಆರೋಪ ಮಾಡಿದ ಸೋದರನ ಪತ್ನಿ

Pinterest LinkedIn Tumblr

yuva

ನವದೆಹಲಿ: ಇತ್ತೀಚೆಗಷ್ಟೇ ಹಿಂದಿ ಬಿಗ್‌ಬಾಸ್‌ಮನೆಯಿಂದ ಹೊರಬಿದ್ದಿರುವ ಆಕಾಂಕ್ಷಾ ಶರ್ಮಾ ಅವರು ಖ್ಯಾತ ಕ್ರಿಕೆಟಿಗ ಯುವರಾಜ್‌ಸಿಂಗ್‌ವಿರುದ್ಧ ಮಾದಕ ದ್ರವ್ಯ ಸೇವನೆ ಆರೋಪ ಮಾಡಿದ್ದಾರೆ.

ಆಕಾಂಕ್ಷಾ ಅವರು ಯುವರಾಜ್‌ಸೋದರ ಜೊರಾವರ್‌ಪತ್ನಿ ಎಂಬುದು ಗಮನಾರ್ಹ ಸಂಗತಿ. ಆದರೆ ಆಕಾಂಕ್ಷಾ ಮತ್ತು ಜೊರಾವರ್‌ಈಗ ಜೊತೆಗಿಲ್ಲ! ಬಿಗ್‌ಬಾಸ್‌ಮನೆಯಲ್ಲಿದ್ದಾಗಲೂ ಆಕಾಂಕ್ಷಾ ಅವರು ಯುವಿ ಮತ್ತವರ ಕುಟುಂಬದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದರು.

ಬಿಗ್’ಬಾಸ್ ಮನೆಯಿಂದ ಹೊರಬಿದ್ದ ಮೇಲೆ ನೀಡಿದ ಸಂದರ್ಶನದಲ್ಲಿ, ಯುವರಾಜ್ ಮಾದಕ ದ್ರವ್ಯವಾದ ಮರಿಜುವಾನಾ ಸೇವಿಸಲಿದ್ದು, ಅವರ ಕುಟುಂಬದವರು ಸಹ ಸೇವಿಸುತ್ತಾರೆ. ನಾನು ಸಹ ನನ್ನ ಪತಿಯೊಂದಿಗೆ ಅದನ್ನು ಸೇವಿಸಿದ್ದೇನೆ. ನಾನು ಕೂಡ ಅದನ್ನು ಸೇವಿಸುತ್ತೇನೆಂದು ಯುವರಾಜ್ ಹೇಳಿಕೊಂಡಿದ್ದು, ಅದಲ್ಲದೆ ಇದೆಲ್ಲ ಸಹಜ ಎಂದಿದ್ದರು. ಯುವಿ ತಾಯಿ ಶಬ್ನಮ್ ತಮ್ಮ ಮಗನನ್ನು ಸಮರ್ಥಿಸಿಕೊಳ್ಳುವುದಕ್ಕೆ ಏನಾದರೊಂದನ್ನು ಹೇಳಬೇಕಷ್ಟೇ ಎಂದು ಆಕಾಂಕ್ಷಾ ಹೇಳಿದ್ದಾರೆ.

Comments are closed.