ರಾಷ್ಟ್ರೀಯ

ಜನಗಣತಿ ಪ್ರಕಾರ ಸುಮಾರು 26 ಲಕ್ಷ ಭಿನ್ನ ಸಾಮರ್ಥ್ಯದ ಮಕ್ಕಳು ಶಿಕ್ಷಣದಿಂದ ವಂಚಿತ.

Pinterest LinkedIn Tumblr

handicap_abilities_1

ದೆಹಲಿ: ಭಾರತದಲ್ಲಿ ಸುಮಾರು 26 ಲಕ್ಷ ಭಿನ್ನ ಸಾಮರ್ಥ್ಯದ ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲ ಅಥವಾ ಅರ್ಧಕ್ಕೇ ಶಾಲೆ ಬಿಟ್ಟವರಾಗಿದ್ದಾರೆ ಎಂದು ಇತ್ತೀಚಿಗೆ ಬಿಡುಗಡೆಯಾಗಿರುವ 2011ರ ಜನಗಣತಿ ಕುರಿತ ವರದಿಯು ಹೇಳಿದೆ.

ದೇಶದಲ್ಲಿಯ 5-19 ವರ್ಷ ವಯೋಮಾನದ ಗುಂಪಿನ 66 ಲಕ್ಷ ಭಿನ್ನ ಸಾಮರ್ಥ್ಯ ಜನಸಂಖ್ಯೆಯ ಶೇ.61ರಷ್ಟು ಅಂದರೆ ಕೇವಲ 40 ಲಕ್ಷ ಮಕ್ಕಳು ಜನಗಣತಿ ನಡೆದ ವರ್ಷದಲ್ಲಿ ಶಾಲೆಗಳಿಗೆ ಹೋಗುತ್ತಿದ್ದರು. ಉಳಿದ ಶೇ.27ರಷ್ಟು ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲ ಮತ್ತು ಶೇ.12 ರಷ್ಟು ಮಕ್ಕಳು ಶಾಲೆಯನ್ನು ಅರ್ಧಕ್ಕೇ ತೊರೆದಿದ್ದಾರೆ ಎಂದು ಅದು ತಿಳಿಸಿದೆ.

Comments are closed.