ಮನೋರಂಜನೆ

ವಿದೇಶದಲ್ಲಿ ಸುಲ್ತಾನ್ ನನ್ನು ಹಿಂದಿಕ್ಕಿದ ಯೆ ದಿಲ್ ಹೆ ಮುಷ್ಕಿಲ್

Pinterest LinkedIn Tumblr

ishನವದೆಹಲಿ: ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಿರ್ದೇಶನದ ಯೆ ದಿಲ್ ಹೈ ಮುಷ್ಕಿಲ್ ಸಿನಿಮಾ ಸಿನಿ ಪ್ರಿಯರ ಹೃದಯ ಗೆದ್ದಿರುವುದು ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಚಿತ್ರ ರಸಿಕರನ್ನು ಸೆಳೆಯುತ್ತಿದೆ. ರಣಬೀರ್ ಕಪೂರ್ ಅಭಿನಯದ ಈ ಚಿತ್ರ ಸಲ್ಮಾನ್ ಖಾನ್ ರ ಸುಲ್ತಾನ್ ಚಿತ್ರವನ್ನು ಕಲೆಕ್ಷನ್ ನಲ್ಲಿ ಹಿಂದಿಕ್ಕಿದೆಯಂತೆ.
ಎಎನ್ಐ ಸುದ್ದಿ ಸಂಸ್ಥೆ ಮಾಡಿರುವ ವರದಿ ಪ್ರಕಾರ, ಸಾಗರೋತ್ತರದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಸುಲ್ತಾನ್ ನನ್ನು ಹಿಂದಿಕ್ಕಿದಿಯಂತೆ. ಅಮೆರಿಕಾ, ಕೆನಡಾಗಳಲ್ಲಿ 7 ಲಕ್ಷ ಡಾಲರ್ ಸಂಪಾದನೆ ಮಾಡಿದೆಯಂತೆ. ಸುಲ್ತಾನ್ ವಿದೇಶಗಳಲ್ಲಿ ಗಳಿಸಿದ್ದು 5 ಲಕ್ಷ ಡಾಲರ್ ರೂಪಾಯಿ.
ಯೆ ದಿಲ್ ಹೆ ಮುಷ್ಕಿಲ್ ನಲ್ಲಿ ಅನುಷ್ಕಾ ಶರ್ಮ, ಐಶ್ವರ್ಯಾ ರೈ ಬಚ್ಚನ್, ಫವದ್ ಖಾನ್ ಕೂಡ ನಟಿಸಿದ್ದಾರೆ. ಚಿತ್ರ ಭಾರತದಲ್ಲಿ ಎರಡು ದಿನಗಳಲ್ಲಿ 26 ಕೋಟಿ ರೂಪಾಯಿ ಸಂಪಾದಿಸಿದೆ. ಬಾಕ್ಸ್ ಆಫೀಸಿನಲ್ಲಿ ಅಜಯ್ ದೇವಗನ್ ಅಭಿನಯದ ಶಿವಾಯ್ ಚಿತ್ರದೊಂದಿಗೆ ಕ್ಲಾಶ್ ಆಗಿದೆ.

Comments are closed.