ನಾಗ್ಪುರ: ಮಹಾರಾಷ್ಟ್ರದಲ್ಲಿ ಅ.31 ರಂದು 5 ಮೋಸ್ಟ್ ವಾಂಟೆಡ್ ಮಾವೋವಾದಿಗಳು ಪೊಲೀಸರಿಗೆ ಶರಣಾಗಿದ್ದಾರೆ.
ಕರಣ್, ಪರ್ವಿನ್, ದರ್ಜು ಕುಲ್ಲೆ, ರೈಜಿ ನಲ್ಗು, ರೀನಾ ಶರಣಾಗತಿ ಬಯಸಿರುವ ನಕ್ಸಲರಾಗಿದ್ದು, ಈ ಎಲ್ಲರ ತಲೆ ಮೇಲೆ ಒಟ್ಟು 1.20 ಮಿಲಿಯನ್ ಬಹುಮಾನ ಘೋಷಿಸಲಾಗಿತ್ತು. ಕರಣ್ ಎಂಬ ಮಾವೋವಾದಿ 2008 ರಿಂದ ಸಕ್ರಿಯವಾಗಿ ನಕ್ಸಲ್ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
8 ವರ್ಷಗಳ ಚಟುವಟಿಕೆಗಳಲ್ಲಿ ಕರಣ್, ಭದ್ರತಾಪಡೆಗಳ ಹತ್ಯೆಯಲ್ಲಿ ಭಾಗವಹಿಸಿದ್ದ, ಅಷ್ಟೇ ಅಲ್ಲದೆ ಸರ್ಕಾರಿ ವಿರೋಧಿ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಾವೋವಾದಿಗಳ ಶರಣಾಗತಿ ಭದ್ರತಾ ಪಡೆಗಳ ನಿರಂತರ ಕ್ರಿಯೆ ಹಾಗೂ ಮಾವೋವಾದಿಗಳು ಸರ್ಕಾರದ ಪುನರ್ವಸತಿ ನೀತಿಗಳ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂಬುದನ್ನು ತಿಳಿಸುತ್ತದೆ ಎಂದು ನಾಗ್ಪುರ ಎಸ್ ಪಿ ದೇಶಮುಖ್ ಹೇಳಿದ್ದಾರೆ.
ರಾಷ್ಟ್ರೀಯ
Comments are closed.