ಮನೋರಂಜನೆ

ರಜನಿಯ 2.0 ಚಿತ್ರದಲ್ಲಿ ಒಂದೇ ಹಾಡು!

Pinterest LinkedIn Tumblr

20ಸೂಪರ್‌ ಸ್ಟಾರ್‌ ರಜನೀಕಾಂತ್‌ ಅಭಿನಯಿಸುತ್ತಿರುವ 2.0 ಸಿನಿಮಾದ ಹಾಡಿಗೆ ಉಕ್ರೇನ್‌ನಲ್ಲಿ ಚಿತ್ರೀಕರಣ ನಡೆದಿದ್ದು, ಇದು ಈ ಸಿನಿಮಾದಲ್ಲಿನ ಏಕೈಕ ಹಾಡಿನ ಚಿತ್ರೀಕರಣ ಎನ್ನಲಾಗಿದೆ.

2010ರಲ್ಲಿ ತೆರೆಕಂಡು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಎಂದಿರನ್‌(ರೋಬೋ) ಸಿನಿಮಾದ ಮುಂದುವರಿದ ಭಾಗ ‘2.0’ ಹೆಸರಿನಲ್ಲಿ ಮುಂದಿನ ವರ್ಷ ಪ್ರೇಕ್ಷಕರ ಮುಂದೆ ಬರಲಿದೆ.

ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅವರ ಸಂಗೀತವಿದ್ದು, ಐದರಿಂದ ಆರು ಹಾಡುಗಳನ್ನು ನಿರೀಕ್ಷಿಸಲಾಗಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ಒಂದು ಹಾಡಿಗೆ ಮಾತ್ರ ಚಿತ್ರೀಕರಣ ಮಾಡಲಾಗುತ್ತಿದೆ.

ಉಕ್ರೇನ್‌ನಲ್ಲಿ ನಡೆಸಲಾಗಿರುವ ಡ್ಯುಯೆಟ್‌ ಹಾಡಿನ ಚಿತ್ರೀಕರಣದಲ್ಲಿ ರಜನೀಕಾಂತ್‌ ಮತ್ತು ನಟಿ ಆ್ಯಮಿ ಜಾಕ್ಸ್‌ ಭಾಗಿಯಾಗಿದ್ದಾರೆ. ಎಸ್‌.ಶಂಕರ್‌ ನಿರ್ದೇಶನದ 2.0 ಸಿನಿಮಾದಲ್ಲಿ ಬಾಲಿವುಡ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಆದಿಲ್‌ ಹುಸೇನ್‌ ಮತ್ತು ಸುಧಾಂಷು ಪಾಂಡೆ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ನವೆಂಬರ್‌ 20ರಂದು ಮುಂಬೈನಲ್ಲಿ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಲಿದೆ.

Comments are closed.