ಮನೋರಂಜನೆ

ಯೆ ದಿಲ್ ಹೈ ಮುಷ್ಕಿಲ್ ನಿಷೇಧಿಸಿದರೆ ಉಗ್ರರ ಉಪಟಳ ನಿಲ್ಲುತ್ತಾ’

Pinterest LinkedIn Tumblr

ishರಣಬೀರ್‌ಕಪೂರ್, ಐಶ್ವರ್ಯಾ ರೈ ಹಾಗೂ ಅನುಷ್ಕಾ ಶರ್ಮಾ ಅಭಿನಯದ, ಕರಣ್‌ ಜೋಹರ್‌ ನಿರ್ದೇಶನದ ‘ಯೆ ದಿಲ್ ಹೈ ಮುಷ್ಕಿಲ್’ ಚಿತ್ರದ ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಬಾಲಿವುಡ್ ಕಲಾವಿದರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಪಾಕಿಸ್ತಾನದ ಕಲಾವಿದ ಫವಾದ್‌ ಖಾನ್ ಅಭಿನಯಿಸಿದ್ದಾರೆ ಎಂಬ ಕಾರಣಕ್ಕೆ ಚಿತ್ರದ ಬಿಡುಗಡೆಗೆ ಅಡ್ಡಿಯುಂಟು ಮಾಡಿರುವ ಕ್ರಮಕ್ಕೆ ಅನೇಕರು ಇದೀಗ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿ, ನಿರ್ಮಾಪಕ ಕರಣ್‌ ಜೋಹರ್ ಬೆನ್ನಿಗೆ ನಿಂತಿದ್ದಾರೆ.

ಮುಂಬೈನಲ್ಲಿ ಈಚೆಗೆ ನಡೆದ ಜಿಯೊ ಮಾಮಿ (ಮುಂಬೈ ಅಕಾಡೆಮಿ ಆಫ್‌ ದ ಮೂವಿಂಗ್‌ ಇಮೇಜ್‌) 18ನೇ ಆವೃತ್ತಿಯ ಹಬ್ಬದಲ್ಲಿ ಬಾಲಿವುಡ್‌ನ ಅನೇಕರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಯಾವುದೇ ರೀತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರಮ ಸರಿಯಲ್ಲ ಎಂದಿರುವ ಬಾಲಿವುಡ್‌ ನಟಿ ಕಲ್ಕಿ ಕೊಚ್ಲಿನ್‌, ‘ಚಿತ್ರವೊಂದನ್ನು ಸೆನ್ಸರ್‌ ಮಾಡುವುದು ಮತ್ತು ಸಿನಿಪ್ರಿಯರಿಂದ ಅದರನ್ನು ದೂರ ಇಡುವುದ ಬೇಸರದ ಸಂಗತಿ’ ಎಂದಿದ್ದಾರೆ.

‘ಚಿತ್ರಗಳನ್ನು ನಿಷೇಧಿಸುವುದರಿಂದ ಭಯೋತ್ಪಾದನೆಯ ನಾಶ ಮಾಡುವುದು ಸಾಧ್ಯವೆಂದಾದರೆ ಈವರೆಗೆ ಸಾಕಷ್ಟು ಚಿತ್ರಗಳನ್ನು ಬ್ಯಾನ್‌ ಮಾಡಬಹುದಿತ್ತು’ ಎಂದು ನಟ ರಿಚಾ ಚಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಚಿತ್ರ ನಿಷೇಧದ ಹೆಸರಿನಲ್ಲಿ ಕರಣ್‌ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ನಿರ್ದೇಶಕಿ ಜೋಯಾ ಅಖ್ತರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಾಕಿಸ್ತಾನ ಕಲಾವಿದ ಫವಾದ್‌ ಖಾನ್‌ ಯಾವ ತಪ್ಪೂ ಮಾಡಿಲ್ಲ. ಅವರು ಈ ನೆಲದ ಕಾನೂನು ಉಲ್ಲಂಘಿಸಿಲ್ಲ. ಸರ್ಕಾರಗಳೇ ವೀಸಾ ನೀಡುತ್ತವೆ. ಕಾನೂನಿನ ಅಡಿಯಲ್ಲಿಯೇ ಅವರು ಇಲ್ಲಿ ಕೆಲಸ ಮಾಡಿದ್ದಾರೆ. ಚಲನಚಿತ್ರಗಳನ್ನು ಮತ್ತು ಕಲಾವಿದರನ್ನು ಗುರಿಯಾಗಿಸುವ ನಡವಳಿಕೆ ದುರದೃಷ್ಟಕರ’ ಎಂದು ಜೋಯಾ ಬೇಸರ ವ್ಯಕ್ತಪಡಿಸಿದ್ದಾರೆ.

‘ಈ ವಿವಾದ ನಾವಂದುಕೊಂಡಂತೆ ಇಲ್ಲ. ಇದು ಚಿತ್ರಕ್ಕೆ ಹೆಚ್ಚಿನ ಪ್ರಚಾರ ತಂದುಕೊಡುತ್ತದೆ’ ಎಂದು ನಟ ಅಭಯ್‌ ಡಿಯೋಲ್‌ ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಯೆ ದಿಲ್‌ ಹೈ ಮುಷ್ಕಿಲ್‌ ಚಿತ್ರದಲ್ಲಿ ಪಾಕಿಸ್ತಾನದ ಕಲಾವಿದ ಫವಾದ್‌ ಖಾನ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಉರಿ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿ, ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ನಂತರ ದಕ್ಷಿಣ ಭಾರತ ಸಿನಿಮಾ ನಿರ್ಮಾಪಕರ ಸಂಘ ಈ ಚಿತ್ರವನ್ನು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿಡುಗಡೆ ಮಾಡದಂತೆ ನಿಷೇಧ ಹೇರಿತ್ತು.

ಇದೀಗ ವಿವಾದ ಬಗೆಹರಿದಿದ್ದು, ಅ.28ಕ್ಕೆ ಚಿತ್ರ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಬಿಡುಗಡೆಯಾಗಲಿದೆ.

**
‘ಹೇಳಲು ಸಾಕಷ್ಟಿದೆ, ಆದರೆ ಏನೂ ಹೇಳಲಾರೆ’
ವಿವಾದದ ಬಗ್ಗೆ ನನಗೆ ಹೇಳಲು ಬಹಳಷ್ಟಿದೆ. ಆದರೆ ಈಗ ನನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ ಜನರು ನನ್ನ ಮನೆ ಮೇಲೆ ದಾಳಿ ಮಾಡಿ ಸುಟ್ಟುಬಿಡುವ ಅಪಾಯವಿದೆ. ಹಾಗಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ನಾನು ಜನರಿಂದ ಹೊಡೆಸಿಕೊಳ್ಳಲು ಅಥವಾ ಬೆದರಿಕೆ ಎದುರಿಸಲು ಸಿದ್ಧನಿಲ್ಲ. ಹಾಗಾಗಿ ಇಂಥ ಸಂದರ್ಭಗಳಲ್ಲಿ ಸುಮ್ಮನಿರುತ್ತೇನೆ.
-ಇಮ್ರಾನ್ ಖಾನ್, ನಟ

**
ಕರಣ್‌ ಜೋಹರ್‌ ‘ಎ ದಿಲ್ ಹೈ ಮುಷ್ಕಿಲ್’ ಚಿತ್ರ ನಿರ್ಮಾಣದ ಕೆಲಸ ಶುರು ಮಾಡಿದಾಗ ಪರಿಸ್ಥಿತಿ ಸರಿಯಿತ್ತು. ಚಿತ್ರ ಬಿಡುಗಡೆಯ ಈ ಸಮಯದಲ್ಲಿ ಕರಣ್‌ ಜೋಹರ್‌ ಅವರನ್ನು ಬಲಿಪಶು ಮಾಡಲಾಗುತ್ತಿದೆ.
–ಜೋಯಾ ಅಖ್ತರ್‌

Comments are closed.