ಕರ್ನಾಟಕ

ದೀಪಾವಳಿಗೆ ಶಾಕ್ ಕೊಟ್ಟ ಖಾಸಗಿ ಬಸ್ಸುಗಳು

Pinterest LinkedIn Tumblr

busಬೆಂಗಳೂರು(ಅ. 26): ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ರೈಲುಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ರಜೆಯಲ್ಲಿ ಊರಿಗೆ, ಪ್ರವಾಸಕ್ಕೆಂದು ಹೋಗುವವರ ಸಂಖ್ಯೆ ಹೆಚ್ಚಾಗಿರುವಾಗ ಅದರ ಲಾಭವನ್ನು ಖಾಸಗಿ ಬಸ್ಸುಗಳ ನಿರ್ವಾಹಕರು ಮಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷವೂ ಇದೇ ಕಥೆ. ಹಬ್ಬಗಳು, ಸರ್ಕಾರಿ ರಜೆ ಬಂದ್ರೆ ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಖಾಸಗಿ ಬಸ್ ಮಾಲೀಕರು ಹಣ ಕಿತ್ತುಕೊಳ್ಳೊಕ್ಕೆ ಪ್ರಾರಂಭಿಸುತ್ತಾರೆ. ಬೆಂಗಳೂರಿನಿಂದ ಹೊರ ರಾಜ್ಯ ಸೇರಿದಂತೆ ಬೇರೆ ಬೇರೆ ನಗರಗಳಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಬೇಕೆಂದರೆ ಸಾವಿರಾರೂ ರೂಪಾಯಿ ಹಣವನ್ನು ಟಿಕೆಟ್’ಗೆ ವೆಚ್ಚಮಾಡಬೇಕು. ಹಬ್ಬದ ಪ್ರಯುಕ್ತ ಊರಿಗೆ ಹೋಗುವ ಅನಿವಾರ್ಯತೆ ಇರುವ ಪ್ರಯಾಣಿಕರು ಡಬ್ಬಲ್ ದುಡ್ಡು ಕೊಟ್ಟು ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಸಾಮಾನ್ಯ ದಿನದ ದರಕ್ಕಿಂತ ಎರಡು ಪಟ್ಟು ಹೆಚ್ಚಳ..!
ಬಸ್ ಮಾರ್ಗ ನಿತ್ಯದ ದರ (ರೂಗಳಲ್ಲಿ) ಹಬ್ಬಕ್ಕೆ ಹೆಚ್ಚಿದ ದರ (ರೂಗಳಲ್ಲಿ)
ಬೆಂಗಳೂರು – ಹುಬ್ಬಳ್ಳಿ 700 1200
ಬೆಂಗಳೂರು – ಮಂಗಳೂರು 550 1200
ಬೆಂಗಳೂರು – ಹೈದರಾಬಾದ್ 900 2200
ಬೆಂಗಳೂರು – ಬೀದರ್ 1000 2000
ಬೆಂಗಳೂರು – ಶಿವಮೊಗ್ಗ 700 1100
ಬೆಂಗಳೂರು – ವಿಜಯಪುರ 850 1495
ಇದೇ ವೇಳೆ, ಈ ಬಾರಿ ಕೆಎಸ್ಸಾರ್ಟಿಸಿ ನಿಗಮವು ಹಬ್ಬದ ಪ್ರಯುಕ್ತ 1500 ವಿಶೇಷ ಬಸ್’ಗಳನ್ನ ಬಿಟ್ಟಿದ್ದಾರೆ. ಇವು ಪ್ರಯಾಣಿಕರ ನೆರವಿಗೆ ಬರಬಲ್ಲುದಾ ಎಂಬುದನ್ನು ಕಾದುನೋಡಬೇಕು.

Comments are closed.