ಮನೋರಂಜನೆ

ಇಶಾ ಅಂಬಾನಿ ಮದುವೆಗೆ ಶಾರುಖ್ ನೃತ್ಯ!

Pinterest LinkedIn Tumblr

nisha-ambaniಮುಂಬೈ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಕುಟುಂಬದಲ್ಲಿ ವಿವಾಹದ ಸಂಭ್ರಮ ಮನೆಮಾಡಿದೆ. ಪುತ್ರಿ ಇಶಾ ಅಂಬಾನಿಯ ವಿವಾಹ ಮುಂಬರುವ ನವೆಂಬರ್ ತಿಂಗಳಲ್ಲಿ ಅದ್ದೂರಿಯಾಗಿ ನಡೆಸಲು ಚಿಂತಿಸಿದ್ದು, ಬಾಲಿವುಡ್ ನಟ ಶಾರುಖ್ ಖಾನ್ ವಿಶೇಷ ನೃತ್ಯ ಪ್ರದರ್ಶನ ನೀಡಲಿದ್ದಾರೆ.

24ರ ಹರೆಯದ ಇಶಾ ಸದ್ಯ ಲಂಡನ್ನ ಯಾಲೆ ವಿಶ್ವವಿದ್ಯಾಲಯದಲ್ಲಿ ಸೈಕಾಲಜಿ ಓದುತ್ತಿದ್ದಾರೆ. ತಮ್ಮ ಸಹಪಾಠಿಯನ್ನು ಹಲವು ವರ್ಷಗಳಿಂದ ಇಶಾ ಪ್ರೀತಿಸುತ್ತಿದ್ದು, ಇದೀಗ ಉಭಯ ಕುಟುಂಬಗಳ ಒಪ್ಪಿಗೆ ಮೇರೆಗೆ ವಿವಾಹವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇಶಾ ಕೈಹಿಡಿಯುವ ಯುವಕನ ಮಾಹಿತಿಯನ್ನು ಮಾತ್ರ ಗುಪ್ತವಾಗಿ ಇರಿಸಲಾಗಿದೆ.

ಈ ವರ್ಷದ ಅತ್ಯಂತ ಅದ್ದೂರಿ ವಿವಾಹ ಇದಾಗಲಿದ್ದು, ರಾಜಕೀಯ ಮುಖಂಡರು, ಸಿನಿಮಾ ತಾರೆಗಳು, ಉದ್ಯಮಿಗಳು ಸೇರಿದಂತೆ ದೇಶ – ವಿದೇಶದಿಂದ ಅನೇಕ ಗಣ್ಯರು ಆಗಮಿಸಲಿದ್ದಾರೆ. ಶಾರುಖ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ಕಲಾವಿದರು ಇಶಾ ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡು, ಹೆಜ್ಜೆ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.