ಮಂಗಳೂರು : ಮುಂಬೈಯ ಪ್ರಸಿದ್ಧ ಅಂಕಣಕಾರ ಹೆಸರಾಂತ ಸಾಹಿತಿ, ಕಾದಂಬರಿಕಾರ, ಅಂಕಣಕಾರ, ವಿಜ್ಞಾನಿ, ಮುಂಬೈಯ ಗೋಕುಲವಾಣಿಯಗೌರವ ಸಂಪಾದಕರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು ಡಾ. ವ್ಯಾಸರಾವ್ ನಿಂಜೂರು ಅವರನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಗೌರವಿಸಿದರು.
ಡಾ. ಎಂ. ಪ್ರಭಾಕರ ಜೋಶಿ, ಪೊಳಲಿ ನಿತ್ಯಾನಂದಕಾರಂತ, ನವನೀತ ಶೆಟ್ಟಿಕದ್ರಿ, ಜಿಲ್ಲಾ ಪರಿಷತ್‌ನಕೋಶಾಧಿಕಾರಿ ಪೂರ್ಣಿಮಾರಾವ್ ಪೇಜಾವರ, ಮೊದಲಾದವರು ಉಪಸ್ಥಿತರಿದ್ದರು. ಡಾ. ವ್ಯಾಸರಾವ್ ನಿಂಜೂರುರವರಇತ್ತೀಚಿಗಷ್ಟೆ ಬಿಡುಗಡೆಯಾದತೆಂಕನಿಡಿಯೂರಿನ ಕುಳುವಾರಿಗಳು ಕಾದಂಬರಿ ಅತ್ಯುತ್ತಮವಾಗಿ ಸರ್ವರಿಂದ ಸ್ವೀಕರಿಸಲ್ಪಟ್ಟದ್ದನ್ನು ಸ್ಮರಿಸಿ ಕೊಳ್ಳಬಹುದು.