ಕರಾವಳಿ

ಶೋಷಿತರ ಧ್ವನಿ ವಾರ್ತಾಭಾರತಿ: ‘ವಾರ್ತಾಭಾರತಿಯ’ 14ನೆ ವಾರ್ಷಿಕ ವಿಶೇಷಾಂಕ ಬಿಡುಗಡೆ ಸಮಾರಂಭದಲ್ಲಿ ಸಿ.ಎಂ. ಸಿದ್ದರಾಮಯ್ಯ

Pinterest LinkedIn Tumblr

vartha_bharati_cm_1

ಬೆಂಗಳೂರು, ಅ.25: ಮಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ವಾರ್ತಾಭಾರತಿ ಕನ್ನಡ ದೈನಿಕ ಇಂದು ಶೋಷಿತರ, ದುರ್ಬಲ ವರ್ಗಗಳ ಧ್ವನಿಯಾಗಿರುವ ರಾಜ್ಯ ಮಟ್ಟದ ಪತ್ರಿಕೆಯಾಗಿದೆ. 14ನೆ ವರ್ಷಕ್ಕೆ ಕಾಲಿಟ್ಟಿರುವ ವಾರ್ತಾಭಾರತಿ ಅವಕಾಶ ವಂಚಿತರ ಪಾಲಿನ ಆಶಾಕಿರಣವಾಗಿ ಕೆಲಸ ಮಾಡುತ್ತಿದೆ. ಪ್ರತಿಯೊಂದುಮಾಧ್ಯಮಗಳು ಮಾಡಬೇಕಾದ ಕೆಲಸವಿದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹದಿನಾಲ್ಕನೆ ವರ್ಷದ ಸಂಭ್ರಮದಲ್ಲಿರುವ ‘ವಾರ್ತಾಭಾರತಿ’ ಪತ್ರಿಕೆಯ ವಾರ್ಷಿಕ ವಿಶೇಷಾಂಕವನ್ನು ಮುಖ್ಯಮಂತ್ರಿಯವರ ಗೃಹಕಚೇರಿ ‘ಕೃಷ್ಣಾ’ದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

vartha_bharati_cm_2 vartha_bharati_cm_3

ವಿಶೇಷಾಂಕದ ಮೊದಲ ಪ್ರತಿಯನ್ನು ಅನಿವಾಸಿ ಭಾರತೀಯ ಉದ್ಯಮಿ ನಾಸಿರ್ ಹುಸೇನ್ ಅವರಿಗೆನೀಡಿದರು. ಓದುಗರ ಪ್ರತಿನಿಧಿಯಾಗಿ ಭಾಗವಹಿಸಿದ್ದ ಅವಿನಾಶ್ ಬೆಂಗಳೂರು ಹಾಗೂ ಬೆಂಗಳೂರಿನ ರುಕ್ಮಿಣಿ ನಾಗಣ್ಣನವರ್ ಅವರೂ ಮುಖ್ಯಮಂತ್ರಿಯವರಿಂದಪ್ರತಿಯನ್ನು ಸ್ವೀಕರಿಸಿದರು.

vartha_bharati_cm_4 vartha_bharati_cm_5

ಈ ಸಂದರ್ಭ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಮುಖ್ಯಮಂತ್ರಿಗಳ ಪ್ರಧಾನಕಾರ್ಯದರ್ಶಿ ಎಲ್.ಕೆ.ಅತೀಖ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ವಿಶುಕುಮಾರ್, ಮಾಜಿ ಸಚಿವ ಸುಬ್ಬಯ್ಯ ಶೆಟ್ಟಿ, ಮಾಧ್ಯಮಕಮ್ಯುನಿಕೇಶನ್ಸ್ ಲಿ. ಮಂಗಳೂರು ಇದರ ನಿರ್ದೇಶಕ ಎಚ್.ಎಂ.ಅಫ್ರೋಝ್ ಅಸ್ಸಾದಿ, ಬ್ಯಾರೀಸ್ ಗ್ರೂಪ್ ಬೆಂಗಳೂರು ಇದರ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ,ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ನಿರ್ದೇಶಕರಾದ ಯಾಸೀನ್ ಮಲ್ಪೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Comments are closed.