ಮನೋರಂಜನೆ

ನಾಯಿ ಮುಂದೆ ಹಾಡುತ್ತಿರುವ ನಟಿ ಅನುಷ್ಕಾ

Pinterest LinkedIn Tumblr

%e0%b2%85%e0%b2%a8%e0%b3%81ಮುಂಬೈ: ಬಾಲಿವುಡ್ನ ಮಿಲ್ಕ್ ಬ್ಯುಟಿ ಅನುಷ್ಕಾ ಶರ್ಮಾ ಪ್ರಾಣಿ ಪ್ರೇಮಿ ಎನ್ನುವುದು ಗೊತ್ತಿರುವ ಸಂಗತಿ. ಬಿಡುವಿನ ಸಮಯದಲ್ಲಿ ಪ್ರಾಣಿಗಳೊಂದಿಗೆ ಕಾಲಕಳೆಯುವ ಈ ನಟಿ ತಮ್ಮ ಮುಂಬರುವ ಏ ದಿಲ್ ಹೈ ಮುಶ್ಕಿಲ್ ಚಿತ್ರದ ‘ಬುಲ್ಲೆಯಾ’ ಗೀತೆಯನ್ನು ಡ್ಯೂಡ್ ಎಂಬ ಹೆಸರಿನ ನಾಯಿಮುಂದೆ ಹಾಡುತ್ತಿರುವುದು ಇದೀಗ ವೈರಲ್ ಆಗಿದೆ.

ಹೌದು, ಅನುಷ್ಕಾ ಹಾಡುತ್ತಿದ್ದಂತೆ ನಾಯಿ ಜಿಗಿದಾಡಲು ಶುರುಮಾಡಿದೆ. ಲ್ಯಾಬ್ರಡಾರ್ ರಿಟ್ರೀವರ್ ಜಾತಿಯ ಈ ನಾಯಿ ಅನುಷ್ಕಾಳ ಅಚ್ಚಯಮೆಚ್ಚಿನ ಸ್ನೇಹಿತೆ ಕೂಡ ಹೌದು. ಈ ವಿಡಿಯೋ ವೀಕ್ಷಿಸಿದ ಮೇಲೆ ಅನುಷ್ಕಾಳ ನಾಯಿ ಪ್ರೇಮ ಯಾವ ಮಟ್ಟದ್ದು ಎನ್ನುವುದು ನಿಮಗೆ ತಿಳಿಯದೇ ಇರದು.

ಇದೇ ಅ.28ರಂದು ಕಣಬೀರ್ ಕಪೂರ್, ಐಶ್ವರ್ಯ ರೈ, ಫವಾದ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ ಏ ದಿಲ್ ಹೈ ಮುಶ್ಕಿಲ್ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

Comments are closed.