ಮನೋರಂಜನೆ

ಐಟಂ ಸಾಂಗ್‌ಗೆ ನೋ ಹೇಳಿದ ಪ್ರಿಯಾಂಕಾ ಚೋಪ್ರಾ

Pinterest LinkedIn Tumblr

priyanka-chopra_640x480_81419843191ಬಾಲಿವುಡ್‌ನಲ್ಲಿ ಜನಪ್ರಿಯತೆ ಪಡೆದು ಹಾಲಿವುಡ್‌ಗೂ ಹಾರಿರುವ ನಟಿ ಪ್ರಿಯಾಂಕ ಚೋಪ್ರಾ ಒಂದರ ಹಿಂದೆ ಒಂದರಂತೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಹಾಲಿವುಡ್ ಚಿತ್ರಗಳ ಜೊತೆ ಜೊತೆಗೆ ಬಾಲಿವುಡ್ ಚಿತ್ರಗಳಲ್ಲಿಯೂ ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಹೃತಿಕ್ ರೋಷನ್ ಜೊತೆ ಐಟಂ ಸಾಂಗ್ ಮಾಡುವುದಿಲ್ಲ ಎಂದು ಸರಾಸಗಟಾಗಿ ತಿರಸ್ಕರಿಸಿ ಬಿಟ್ಟಿದ್ದಾರೆ ಪ್ರಿಯಾಂಕ ಚೋಪ್ರಾ.

ಬಾಲಿವುಡ್ ಚಿತ್ರಗಳ ಜೊತೆ ಹಾಲಿವುಡ್‌ನಲ್ಲಿಯೂ ಬ್ಯುಸಿಯಾಗಿರುವ ಪ್ರಿಯಾಂಕ ಚೋಪ್ರಾ, ರಾಕೇಶ್ ರೋಷನ್ ಜೊತೆ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲು ನಯವಾಗಿಯೇ ತಿರಸ್ಕರಿಸಿದ್ದಾರೆ.ಅದಕ್ಕೆ ಆಕೆ ಕೊಟ್ಟಿರುವ ಕಾರಣ ಬಿಡುವಿಲ್ಲ ಹಾಗಾಗಿ ನಟಿಸುವುದಿಲ್ಲ ಎಂದಿದ್ದಾರೆ. ಆದರೆ ಬಾಲಿವುಡ್‌ನ ಮೂಲಗಳ ಪ್ರಕಾರ ಇತ್ತೀಚೆಗೆ ನಟಿ ಕಂಗನಾ ರಾವುತ್ ಜೊತೆ ಹಾದಿ ಬೀದಿ ರಂಪ ಮಾಡಿಕೊಂಡಿದ್ದ ಹೃತಿಕ್ ರೋಷನ್ ಜಗಳ ಇನ್ನೂ ತಣ್ಣಗಾಗಿಲ್ಲವಾದ್ದರಿಂದ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿಲ್ಲ ಎನ್ನಲಾಗುತ್ತಿದೆ.

ಈ ಹಿಂದೆ ರಾಕೇಶ್ ರೋಷನ್ ನಿರ್ಮಾಣದ “ಕ್ರಿಶ್” ಮತ್ತು “ಕ್ರಿಶ್-೩” ಚಿತ್ರಗಳಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿಸಿದ್ದರು.ಅದೇ ಕಾರಣಕ್ಕಾಗಿ ಪುತ್ರನಿಗಾಗಿ ನಿರ್ಮಿಸುತ್ತಿರುವ “ಕಾಬಿಲ್”ಚಿತ್ರದಲ್ಲಿ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳುವಂತೆ ರಾಕೇಶ್ ರೋಷನ್ ಪ್ರಿಯಾಂಕ ಚೋಪ್ರಾ ಅವರನ್ನು ಕೇಳಿಕೊಂಡಿದ್ದಾರೆ. ಅದಕ್ಕೆ ಪ್ರಿಯಾಂಕ ನಾನು ಐಟಂ ಹಾಡಿನಲ್ಲಿ ನಟಿಸುವುದಿಲ್ಲ. ನನಗೆ ಈಗ ಸಮಯೂ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ.
ಪ್ರಿಯಾಂಕ ನಟಿಸುತ್ತಾಳೆ. ನನ್ನ ಮಾತಿಗೆ ಇಲ್ಲ ಎನ್ನುವುದಿಲ್ಲ ಎನ್ನುವ ವಿಶ್ವಾಸದಲ್ಲಿದ್ದ ರಾಕೇಶ್ ರೋಷನ್ ತೀವ್ರ ನಿರಾಸೆಯಿಂದ ವಾಪಸ್ ಬಂದಿದ್ದಾರೆ.
ಅಪ್ಪ ಕೇಳಿಬಂದ ಬಳಿಕ ರಾಕೇಶ್ ರೋಷನ್ ಕೂಡ ನಟಿಸುವಂತೆ ಕೇಳಿಕೊಂಡಿದ್ದರು ಆಗಲೂ ಒಪ್ಪಿಕೊಳ್ಳಲು ಪ್ರಿಯಾಂಕ ನಿರಾಕರಿಸಿದ್ದಾರೆ. ಸದ್ಯ ಹಾಲಿವುಡ್‌ನ ’ಕ್ವಾಂಟಿಕೋ ಸೀಸನ್ -೨’ ಚಿತ್ರದಲ್ಲಿ ಬ್ಯುಸಿಯಾಗಿದ್ದೇನೆ ಅನ್ಯತಾ ಬಾವಿಸಬೇಡಿ ಸಮಯವಿದ್ದರೆ ನಟಿಸುತ್ತಿದ್ದೆ ಎಂದು ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ.
ಮೂಲಗಳ ಪ್ರಕಾರ ಪ್ರಿಯಾಂಕ ಚೋಪ್ರಾ ಮುಂಬರುವ ಚಿತ್ರಗಳಿಗೆ ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ಯಾವುದೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಮಾತುಗಳೂ ಕೇಳಿಬಂದಿದೆ.
ಆದರೆ ಬಾಲಿವುಡ್ ಮಂದಿ ಹೇಳುವುದೇ ಬೇರೆ ಇತ್ತೀಚೆಗೆ ನಟಿ ಕಂಗನಾ ರಾವುತ್ ಜೊತೆ ಹಾದಿ ಬೀದಿ ರಂಪ ಮಾಡಿಕೊಂಡಿದ್ದ ನಟ ಹೃತಿಕ್ ರೋಷನ್ ಜೊತೆ ನಟಿಸಲು ಪ್ರಿಯಾಂಕ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.
ಹೃತಿಕ್ ರೋಷನ್ ಹಾಗು ಯಾಮಿ ಗೌತಮಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ “ಕಬಿಲ್”ಚಿತ್ರದ ಹಾಡಿನಲ್ಲಿ ಕುಣಿಯುವಂತೆ ಪ್ರಿಯಾಂಕ ಚೋಪ್ರಾ ಅವರನ್ನು ಕೇಳಿಕೊಳ್ಳಲಾಗಿತ್ತು. ಪ್ರಿಯಾಂಕ ನಿರಾಕರಿಸಿರುವುದರಿಂದ ಐಟಂ ಹಾಡಿನಲ್ಲಿ ಕುಣಿಯಲು ಮತ್ತೊಬ್ಬ ನಟಿಗಾಗಿ ರಾಕೇಶ್ ರೋಷನ್ ತಲಾಷ್ ನಡೆಸಿದ್ದಾರೆ.

Comments are closed.