ನವದೆಹಲಿ, ಅ. ೨೫- ಪ್ರಧಾನಿ ಮಂತ್ರಿ ಮೋದಿ ಅವರು `ವಿಧೇಯತೆಯಿಂದ ಕೂಡಿದ ಮಗ` ಎಂದೂ ಸಮಾಜವಾದಿ ಪಕ್ಷದ ವರಿಷ್ಠ ನಾಯಕ ಪ್ರಧಾನಿಯನ್ನು ಹೊಗಳಿದ್ದಾರೆ. `ಮೋದಿ ಅವರನ್ನು ನೋಡಿ, ಅತ್ಯಂತ ಪರಿಶ್ರಮ ಪಟ್ಟ ಪ್ರಧಾನಿ ಹುದ್ದೆಗೆ ಏರಿದರು. ಆದರೂ ತಮ್ಮ ತಾಯಿಯನ್ನು ಮರೆತಿಲ್ಲ. ಅವರಿಗೆ ಅತ್ಯಂತ ವಿಧೇಯರಾಗಿದ್ದಾರೆ.
ತಮ್ಮ ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ತಾಯಿಯನ್ನು ಭೇಟಿ ಮಾಡುತ್ತಾರೆ, ಅವರಿಂದ ಆಶೀರ್ವಾದ ಪಡೆಯುತ್ತಾರೆ ಎಂದು ಲಖನೌದ ಬಹಿರಂಗ ಸಭೆಯೊಂದರಲ್ಲಿ ಹೇಳಿದ್ದಾರೆ.
ಮೋದಿ ಅವರು `ವಿಧೇಯ ಮಗ` ಎಂದು ಪ್ರಸ್ತಾಪಿಸಿರುವುದು, ಪರೋಕ್ಷವಾಗಿ ತಮ್ಮ ಪುತ್ರ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರನ್ನು ಗುರಿಯಾಗಿಟ್ಟುಕೊಂಡೆ ಎಂಬುದು ಗುಟ್ಟೇನೂ ಅಲ್ಲ.
ಪುತ್ರ ಅಖಿಲೇಶ್ ಯಾದವ್ ತಮ್ಮ ವಿರುದ್ಧವೇ ತಿರುಗಿ ಬಿದ್ದಿರುವುದು ಮುಲಾಯಂ ಚಿಂತೆಗೆ ಕಾರಣವಾಗಿದೆ. ಮಗ ತಮಗೆ ವಿಧೇಯನಾಗಿಲ್ಲ ಎಂಬ ನೋವು ಇದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದ ಯಾರಿಗಾದರೂ ಇದು ಅರ್ಥವಾಗುತ್ತದೆ.
ಲಕ್ಷ್ಮಣ ರೇಖೆ ದಾಟಿಲ್ಲ
ರಾಜಕೀಯದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಹಜ. ಆದರೆ ತಾವು ಎಂದೂ ಲಕ್ಷ್ಮಣ ರೇಖೆ ದಾಟಿರಲಿಲ್ಲ ಎಂದು ಹೇಳುವಾಗಲೂ ಆ ಮಾತಿನ ಹಿಂದೆ ಇದ್ದದ್ದು ಅಖಿಲೇಶ್ ಯಾದವ್. ರಾಜಕೀಯ ಬೆಳವಣಿಗೆಗಳು ಏನೇ ಆಗಲಿ, ಭಿನ್ನಾಭಿಪ್ರಾಯಗಳು ವ್ಯಕ್ತವಾಗಲಿ, ಆದರೆ, ಬಹಿರಂಗವಾಗಿಯೇ ತಂದೆಗೆ ಸವಾಲಾಗಿ ಪರಿಣಮಿಸುವುದು ಮುಲಾಂ ದೃಷ್ಟಿಯಲ್ಲಿ ಲಕ್ಷ್ಮಣ ರೇಖೆ ದಾಟಿದಂತೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ.