ಮನೋರಂಜನೆ

ಬಿಗ್‌ಬಾಸ್‌ ಮನೆಯಲ್ಲಿ ಮಾಳವಿಕಗೆ ‘0’ ಮಾರ್ಕ್ ನೀಡಿದ ದೊಡ್ಡ ಗಣೇಶ್‌…ಮುಂದೆ ಹೇಳಿದ್ದೇನು ಗೊತ್ತಾ..?

Pinterest LinkedIn Tumblr

malavika

ಬಿಗ್‌ಬಾಸ್‌ ಮನೆಯಿಂದ ಹೊರಬಂದಿರುವ ದೊಡ್ಡ ಗಣೇಶ್‌ ನಿನ್ನೆ ನಡೆದ ಸೂಪರ್‌ ಸಂಡೇ ವಿಥ್‌ ಸುದೀಪ್‌ ಎಪಿಸೋಡ್‌ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಮಾಳವಿಕಾ ಆಟ ಆಡುತ್ತಿರುವ ಕುರಿತು ಕಿಡಿಕಾರಿರುವ ದೊಡ್ಡ ಗಣೇಶ್, ವಿಕೆಟ್‌ ಕೀಪರ್‌ ನಂತೆ ಎಲ್ಲವನ್ನು ಹಿಂದೆ ಇದ್ದುಕೊಂಡು ಮಾಡುತ್ತಿದ್ದಾರೆ. ಅವರು ಗುಂಪು ಕಟ್ಟಿಕೊಂಡು ಬೇರೆಯವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನ ಬಗ್ಗೆ ಅವರು ಟೀಕೆ ಮಾಡಿದ್ದು, ಒಳ್ಳೆಯ ಅಭಿಪ್ರಾಯ ಇದ್ದಿರಲಿಲ್ಲ ಎಂದರು.

ಬಿಗ್‌ಬಾಸ್‌ ಮನೆಯಲ್ಲಿರುವವರ ಕುರಿತು ನೀವು ಯಾರ್ಯಾರಿಗೆ ಎಷ್ಟೆಷ್ಟು ಮಾರ್ಕ್ ಕೊಡ್ತೀರಿ ಎಂಬ ಸುದೀಪ್ ಪ್ರಶ್ನೆಗೆ, ಮಾಳವಿಕಗೆ 0, ಭುವನ್, ಪ್ರಥಮ್’ಗೆ ಟಾಲಾ 10 ಮಾರ್ಕ್ ನೀಡಿದರೆ, ಶಾಲಿನಿ, ಚೈತ್ರರಿಗೆ ಒಂದೊಂದು ಮಾರ್ಕ್ ನೀಡಿ, ತಮಗಾದ ನೋವನ್ನು ತೋಡಿಕೊಂಡರು.

ಬಿಗ್‌ಬಾಸ್‌ ಮನೆಯಲ್ಲಿ ಗ್ರೂಪಿಸಂ ಇದೆ. ಮಾಳವಿಕಾ, ಶಾಲಿನಿ, ನಿರಂಜನ್‌, ಕೀರ್ತಿ ಮತ್ತು ಈಗೀಗ ಶೀತಲ್‌ ಶೆಟ್ಟಿ ಕೂಡ ಆ ಗ್ರೂಪ್‌ನಲ್ಲಿ ಸೇರಿಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಥಮ್‌ ವಿಚಾರವಾಗಿ ಮಾತನಾಡಿದ ದೊಡ್ಡ ಗಣೇಶ್‌ ‘ಅವನೊಬ್ಬ ಒಳ್ಳೆಯ ಹುಡ್ಗ, ಸ್ಟ್ರೈಟ್‌ ಫಾರ್ವರ್ಡ್‌ ಇರ್ತಾನೆ. ಆದರೆ ಅವನ ಸ್ವಭಾವ ಅಲ್ಲಿದ್ದವರಿಗೆ ಆಗೋದಿಲ್ಲ’ ಎಂದು ಹೇಳಿದರು. ಪ್ರಥಮ್ಇ ಇರುವವರೆಗೆ ಬಿಗ್‌ಬಾಸ್‌ ಮನೆಗೆ ಕಳೆ ಇದೆ ಎಂದರು.

Comments are closed.