ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ, ಜಪಾನಿನ ಪರ್ವತಾರೋಹಿ ಜುನ್ಕೊ ಟಬೈ (77) ನಿಧನ ಹೊಂದಿದರು. ಟಬೈ ಅವರು ಎವರೆಸ್ಟ್‌ನು 1975ರಲ್ಲಿ ಹತ್ತಿದ್ದರು. ಆಗ ಅವರಿಗೆ 35 ವರ್ಷ ವಯಸ್ಸಾಗಿತ್ತು. ಎವರೆಸ್ಟ್ ಏರಲು 12 ದಿನ ತೆಗೆದುಕೊಂಡಿದ್ದರು. ಆ ವೇಳೆ ಹಿಮಪಾತದಲ್ಲಿ ಸಿಲುಕಿಕೊಂಡಿದ್ದರು. ಅದರಿಂದ ಹೊರಬಂದು ಪರ್ವತಾರೋಹಣವನ್ನು ಮುಂದುವರಿಸಿದ್ದರು.
ಅಲ್ಲದೇ 1992ರ ವೇಳೆಗೆ ವಿಶ್ವದ ಎಲ್ಲಾ 7 ಎತ್ತರದ ಶಿಖರಗಳನ್ನು ಏರಿದ ಸಾಧನೆ ಮಾಡಿದ್ದರು. ಟಬೈ ಅವರು ಮೂಲತಃ ಫುಕುಶಿಮಾದವರಾಗಿದ್ದು, ಕಳೆದ 4 ವರ್ಷಗಳಿಂದ ಅವರು ಉದರ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಟಬೈ ಎವರೆಸ್ಟ್ ಏರಿದ ವಿಶ್ವದ ಮೊದಲ ಮಹಿಳೆಯಾಗಿದ್ದರೆ, ಎವರೆಸ್ಟ್ ಶಿಖರ ಏರಿದ ಮೊದಲ ಭಾರತೀಯ ಮಹಿಳೆ ಬಚೇಂದ್ರಿಪಾಲ್. 1984ರಲ್ಲಿ ಪಾಲ್ ಪರ್ವತಾರೋಹಣ ಮಾಡಿದ್ದರು.