
ಬಾಲಿವುಡ್ ಮಾದಕ ನಟಿ ಮಲ್ಲಿಕಾ ಶೆರಾವತ್ ಪ್ಯಾರಿಸ್ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಸಿರಿಲ್ ಆಕ್ಸೆನ್ಫಾನ್ಸ್ ಜತೆ ಫ್ರಾನ್ಸ್ನಲ್ಲಿಯೇ ಸೆಟಲ್ ಆಗಿದ್ದಾರೆ. ಲಿವ್ ಇನ್ ರಿಲೇಷನ್ಶಿಪ್ನಲ್ಲಿರುವ ಮಲ್ಲಿಕಾ, ‘ಪ್ರೀತಿಯಲ್ಲಿರುವಂತಹ ಅದ್ಭುತ ಅನುಭವ ವಿಶ್ವದಲ್ಲಿಯೇ ಮತ್ತೊಂದಿಲ್ಲ’ ಎಂದು ಸಿರಿಲ್ ಜತೆಗಿನ ಫೋಟೋ ಅಪ್ಲೋಡ್ ಮಾಡಿದ್ದರು.
ಅದಾಗುತ್ತಲೇ ಬಾಲಿವುಡ್ ಅಂಗಳದಲ್ಲಿ ಮಲ್ಲಿ ಮತ್ತು ಸಿರಿಲ್ ಮದುವೆ ಫಿಕ್ಸ್ ಆಗಿದೆ ಎಂಬ ಸುದ್ದಿ ಹರಿದಾಡತೊಡಗಿತು. ಆದರೆ ಮಲ್ಲಿಕಾ, ‘ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ. ನನ್ನ ಮದುವೆ ಆದಾಗ ಎಲ್ಲರಿಗೂ ನಾನೇ ತಿಳಿಸುತ್ತೇನೆ’ ಎಂದು ಸಿಟ್ಟಾಗಿದ್ದರು. ಸದ್ಯ ಸಿರಿಲ್ರನ್ನು ಭಾರತಕ್ಕೆ ಕರೆದುಕೊಂಡು ಬರಲಿದ್ದಾರಂತೆ ಮಲ್ಲಿಕಾ. ‘ನನಗೆ ಸಿರಿಲ್ ಬಗ್ಗೆ ಹೆಮ್ಮೆಯಿದೆ. ಅವರನ್ನು ಶೀಘ್ರದಲ್ಲೆ ಮುಂಬೈಗೆ ಕರೆತರಲಿದ್ದೇನೆ. ಅವರು ನನ್ನನ್ನು ಪ್ಯಾರಿಸ್ ಸುತ್ತಿಸಿದ್ದಾರೆ, ಫ್ರೆಂಚ್ ಸ್ಟೈಲ್ನಲ್ಲಿ ರೊಮ್ಯಾನ್ಸ್ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಈಗ ಅವರಿಗೆ ಭಾರತೀಯ ಸ್ಟೈಲ್ನಲ್ಲಿ ರೊಮ್ಯಾನ್ಸ್ ಕಲಿಯುವ ಸಮಯ. ಅವರನ್ನು ತಾಜ್ವುಹಲ್ಗೆ ಕರೆದೊಯ್ಯಲಿದ್ದೇನೆ. ಬೀದಿಬದಿ ತಿಂಡಿ ತಿನಿಸುಗಳನ್ನು ತಿನಿಸಲಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ ಮಲ್ಲಿಕಾ ಶೆರಾವತ್.
ಮತ್ತೊಂದು ಮೂಲದ ಪ್ರಕಾರ 39 ವರ್ಷದ ಮಲ್ಲಿಕಾ, ಸಿರಿಲ್ ಮಗುವಿಗೆ ತಾಯಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರಂತೆ. ಮದುವೆಯಾದ ಬಳಿಕವೋ ಅಥವಾ ಮದುವೆಗೂ ಮುನ್ನವೋ ಎಂಬುದನ್ನು ಮಾತ್ರ ಹೇಳಿಕೊಂಡಿಲ್ಲ!
Comments are closed.