ಮನೋರಂಜನೆ

ಮತ್ತೆ ಅರ್ಬಾಜ್ ಮನೆಗೆ ತೆರಳಲು ಮಲೈಕಾ ನಿರ್ಧಾರ

Pinterest LinkedIn Tumblr

Arbaaz Khan and Malaika Aroraಮುಂಬೈ: ಇತ್ತೀಚೆಗಷ್ಟೇ ವಿಚ್ಛೇದನಕ್ಕೆ ಮುಂದಾಗುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಜೋಡಿ ಮತ್ತೆ ಒಂದಾಗುತ್ತಿದೆ ಎಂಬ ಸುದ್ದಿ ಬಾಲಿವುಡ್ ನಾದ್ಯಂತ ಹಬ್ಬಿದೆ.
ಬಾಲಿವುಡ್ ಹಾಟ್ ಜೋಡಿಗಳಲ್ಲಿ ಒಂದಾದ ಅರ್ಬಾಜ್ ಖಾನ್ ಹಾಗೂ ಮಲೈಕಾ ಜೋಡಿ ಒಂದಾಗುತ್ತಿದೆಯೇ..ಹೌದು ಎನ್ನುತ್ತಿದೆ ಬಿ-ಟೌನ್. ವಿಚ್ಛೇದನಕ್ಕೆ ಮುಂದಾಗುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಈ ಜೋಡಿ ಇದೀಗ ಸಕಾರಾತ್ಮಕ ಕಾರಣಗಳಿಂದಾಗಿ ಮತ್ತೆ ಸುದ್ದಿ ಮಾಡುತ್ತಿದ್ದು, ಅರ್ಬಾಜ್ ಹಾಗೂ ಮಲೈಕಾ ಒಂದಾಗುತ್ತಿದ್ದಾರಂತೆ. ವಿಚ್ಚೇದನ ಪಡೆಯದಂತೆ ಕುಟುಂಬಸ್ಥರು ಇವರಿಬ್ಬರ ಮನವೊಲಿಸಿದ್ದು, ಇದೀಗ ಈ ಜೋಡಿ ಮತ್ತೆ ಒಂದಾಗುವ ಕುರಿತು ನಿರ್ಧಾರ ಕೈಗೊಂಡಿದ್ದಾರಂತೆ.
ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಈ ಜೋಡಿ ಒಟ್ಟೊಟ್ಟಿಗೆ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಹಿಂದೆ ಕರ್ವ ಚೌತ್ ನಲ್ಲಿಯೂ ಕೂಡ ಒಟ್ಟಿಗೆ ಹಬ್ಬದ ಆಚರಣೆ ಮಾಡಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಪರಸ್ಪರ ವಿರಸದ ಬಳಿಕ ಅರ್ಬಾಜ್ ಖಾನ್ ಮನೆಯಿಂದ ಹೊರ ಹೋಗಿದ್ದ ಮಲೈಕಾ ಮತ್ತೆ ತಮ್ಮ ಮಗನೊಂದಿಗೆ ಮನೆಗೆ ವಾಪಸ್ ಆಗಲು ನಿರ್ಧರಿಸಿದ್ದಾರಂತೆ.
ಇಷ್ಟಕ್ಕೂ ಈ ಜೋಡಿ ಮತ್ತೆ ಒಂದಾಗಲು ಅವರ ಕುಟುಂಬಸ್ಥರೇ ಕಾರಣ ಎಂದೂ ಸುದ್ದಿಗಳು ಹರಿದಾಡುತ್ತಿವೆ. ಮಲೈಕಾ ಸಹೋದರಿ ಅಮೃತಾ ಅರೋರಾ ಅವರು ಮಲೈಕಾರನ್ನು ಸಮಾಧಾನ ಪಡಿಸಿದ್ದರೆ, ಅರ್ಬಾಜ್ ಖಾನ್ ರನ್ನು ಸಹೋದರ ಸಲ್ಮಾನ್ ಖಾನ್ ಸಂತೈಸಿದ್ದಾರಂತೆ. ಅಲ್ಲದೆ ನಟ ಸಲ್ಮಾನ್ ಖಾನ್ ಮಲೈಕಾರೊಂದಿಗೂ ಮಾತುಕತೆ ನಡೆಸಿದ್ದು, ಬೇರೆ-ಬೇರೆಯಾಗದಂತೆ ಕಿವಿಮಾತು ಹೇಳಿದ್ದಾರೆ. ಸಲ್ಮಾನ್ ಖಾನ್ ಮಾತಿಗೆ ಬೆಲೆ ನೀಡಿರುವ ಮಲೈಕಾ ಮತ್ತೆ ಅರ್ಬಾಜ್ ಖಾನ್ ರನ್ನು ಸೇರಲು ನಿರ್ಧರಿಸಿದ್ದಾರಂತೆ.
ಒಟ್ಟಾರೆ ಖಾನ್ ಕುಟುಂಬದ ವಿಚ್ಚೇದನ ಪ್ರಹಸನ ಸುಖಾಂತ್ಯ ಕಾಣುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Comments are closed.