ಅಂತರಾಷ್ಟ್ರೀಯ

ಪಾಕ್ ನಲ್ಲಿ ಇಂಡಿಯಾದ ಟಿ.ವಿ, ರೇಡಿಯೋ ಪ್ರಸಾರಕ್ಕೆ ಸಂಪೂರ್ಣ ನಿಷೇಧ

Pinterest LinkedIn Tumblr

smart-tvಇಸ್ಲಮಾಬಾದ್: ಭಾರತ–ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ ಕಾರಣದಿಂದ ಶುಕ್ರವಾರದಿಂದ ಭಾರತದ ಟಿ.ವಿ ಹಾಗೂ ರೇಡಿಯೊ ಕಾರ್ಯಕ್ರಮ ಪ್ರಸಾರದ ಮೇಲೆ ಸಂಪೂರ್ಣ ನಿಷೇಧ ಹೇರಿ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿರ್ವಹಣಾ ಆಯೋಗ ಬುಧವಾರ ಆದೇಶಿಸಿದೆ.
ಪಾಕಿಸ್ತಾನ ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಆಯೋಗವು, ಅಕ್ಟೋಬರ್ 21 ರ ಮಧ್ಯಾಹ್ನ 3 ಗಂಟೆಯಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಒಂದು ವೇಳೆ ನಿಷೇಧ ಉಲ್ಲಂಘಿಸಿ ಪ್ರಸಾರ ಮಾಡಿದವರ ಪರವಾನಗಿ ರದ್ದುಪಡಿಸುವ ಎಚ್ಚರಿಕೆಯನ್ನೂ ನೀಡಿದೆ.
ಪಾಕಿಸ್ತಾನದಲ್ಲಿ ಪ್ರಸಾರವಾಗುವ ಎಲ್ಲ ಟಿ.ವಿ. ರೇಡಿಯೊ ಮಾಧ್ಯಮಗಳಿಗೆ ಇದು ಅನ್ವಯಿಸುತ್ತದೆ. ಪರ್ವೇಜ್ ಮುಷರಫ್ ಅವರು 2006ರಲ್ಲಿ ಭಾರತೀಯ ಮಾಧ್ಯಮಗಳಿಗೆ ನೀಡಿದ್ದ ಏಕಮುಖ ಹಕ್ಕುಗಳನ್ನು ರದ್ದುಗೊಳಿಸಲೂ ಆಯೋಗ ನಿರ್ಧರಿಸಿದೆ.

Comments are closed.