ರಾಷ್ಟ್ರೀಯ

ಇಂಡಿಯಾ-ಪಾಕ್ ಸಂಘರ್ಷಕ್ಕಿಂತ ರಾಮಮಂದಿರಕ್ಕಾಗಿ ಜೀವಹಾನಿ ಅಧಿಕ: ವಿನಯ್ ಕಟಿಯಾರ್

Pinterest LinkedIn Tumblr

vinay-katiyar-2ಲಖನೌ: ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ವಪಕ್ಷೀಯರನ್ನೇ ಮುಜುಗರಕ್ಕೀಡು ಮಾಡುವಂತೆ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ವಿನಯ್ ಕಟಿಯಾರ್ ರಾಮಮಂದಿರಕ್ಕಾಗಿ 3.5 ಲಕ್ಷ ಜನರು ಜೀವತೆತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾರತ- ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಮೃತಪಟ್ಟವರಿಗಿಂತ ರಾಮಮಂದಿರಕ್ಕಾಗಿ ಜೀವ ಕಳೆದುಕೊಂಡವರ ಸಂಖ್ಯೆ ಹೆಚ್ಚಿದೆ ಆದ್ದರಿಂದ ರಾಮಮಂದಿರ ನಿರ್ಮಾಣ ಆಗಲೇ ಬೇಕು ಎಂದು ವಿನಯ್ ಕಟಿಯಾರ್ ಪಟ್ಟು ಹಿಡಿದ್ದಾರೆ. ಕೇಂದ್ರ ಸರ್ಕಾರದ ರಾಮಾಯಾಣ ಮ್ಯೂಸಿಯಂ ಪ್ರಸ್ತಾವನೆಯನ್ನು ತೀವ್ರವಾಗಿ ಟೀಕಿಸಿದ್ದ ಬಿಜೆಪಿ ಸಂಸದ ವಿನಯ್ ಕಟಿಯಾರ್ ರಾಮಮಂದಿರದ ನಿರೀಕ್ಷೆಯಲ್ಲಿರುವವರಿಗೆ ಕೇಂದ್ರ ಸರಕಾರ ರಾಮಾಯಣ ಮ್ಯೂಸಿಯಂ ಎಂಬ ಲಾಲಿಪಾಪ್ ನೀಡಲು ಮುಂದಾಗಿದೆ ಎಂದು ಲೇವಡಿ ಮಾಡಿದ್ದರು. ಈಗ ಭಾರತ- ಪಾಕ್ ನಡುವಿನ ಯುದ್ಧದಲ್ಲಿ ಮಾಡಿದವರಿಗಿಂತಲೂ ಹೆಚ್ಚು ಜನರು ರಾಮಮಂದಿರಕ್ಕಾಗಿ ಜೀವ ಅರ್ಪಿಸಿದ್ದಾರೆ ಎಂದು ಹೇಳಿರುವ ವಿನಯ್ ಕಟಿಯಾರ್ ರಾಮಮಂದಿರ ಪುರಾತನ ವಿಷಯವಾಗಿದೆ. ರಾಮಮಂದಿರ ನಿರ್ಮಾಣವಾಗುವವರೆಗೂ ಈ ವಿಷಯ ಮುಕ್ತಾಯವಾಗುವುದಿಲ್ಲ ಎಂದು ವಿನಯ್ ಕಟಿಯಾರ್ ಅಭಿಪ್ರಾಯಪಟ್ಟಿದ್ದಾರೆ.
ಇದೆ ವೇಳೆ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣ ಮಾಡುವ ಘೋಷಣೆ ಮಾಡುವ ಬದಲು ರಾಮಾಯಣ ಮ್ಯೂಸಿಯಂ ನಿರ್ಮಾಣ ಘೋಷಣೆ ಮಾಡಿರುವುದು ದೊಡ್ಡ ತಪ್ಪು ಎಂದು ವಿನಯ್ ಕಟಿಯಾರ್ ಹೇಳಿದ್ದಾರೆ.

Comments are closed.