
ಮೊದಲ ವಾರವೇ ಮನೆಯಿಂದ ವಾಣಿಶ್ರೀ ಹೊರ ನಡೆದರೆ ಇತ್ತ ಬಿಗ್ ಬಾಸ್ ಮನೆಗೆ ವಿವಾದಾತ್ಮಕ ನಿರ್ದೇಶಕ ಓಂಪ್ರಕಾಶ್ ರಾವ್ ಎಂಟ್ರಿಕೊಟ್ಟಿದ್ದಾರೆ.
ಬಿಗ್‌ಬಾಸ್ ಕಾರ್ಯಕ್ರಮ ಕುರಿತು ಕಿಚ್ಚ ಸುದೀಪ್ ನಡೆಸಿಕೊಡುವ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಬಿಗ್‌ಬಾಸ್ ಮನೆಯಲ್ಲಿ ಒಂದು ಇಂಪಾರ್ಟೆಂಟ್ ಘಟನೆ ನಡೆಯಲಿದೆ ಎಂದು ಹೇಳಿದ್ದರು. ಇದರಂತೆ ರಾತ್ರಿ 2.30 ಸುಮಾರಿಗೆ ಓಂಪ್ರಕಾಶ್ ರಾವ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಬಿಗ್‌ಬಾಸ್ ಮನೆಯ ಸದಸ್ಯರಲ್ಲಿ ಕರೆಂಟ್ ಪಾಸಾಗಿದೆ.
ಲಾಕಪ್ ಡೆತ್ ಚಿತ್ರದ ಪ್ರಸಿದ್ಧ ಹಾಡು ಬಂತು ಬಂತು ಕರೆಂಟ್ ಬಂತು ಹಾಡು ಪ್ಲೇ ಆಗುತ್ತಿದ್ದಂತೆ ಅದೇ ಲಾಕಪ್ ಡೆತ್ ಚಿತ್ರದ ನಿರ್ದೇಶಕ ಓಂಪ್ರಕಾಶ್ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಗೃಹ ಪ್ರವೇಶ ಮಾಡಿದ್ದಾರೆ.
Comments are closed.