ಮನೋರಂಜನೆ

ಪಾಕ್‌ ಕಲಾವಿದರೊಂದಿಗೆ ನಟಿಸುವುದಿಲ್ಲ: ಅಜಯ್‌ ದೇವಾಗನ್

Pinterest LinkedIn Tumblr

ajayಮುಂಬೈ: ಪಾಕ್‌ ಕಲಾವಿದರೊಂದಿಗೆ ನಟಿಸುವುದಿಲ್ಲ, ಹಾಗೂ ವೇದಿಕೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ಬಾಲಿವುಡ್‌ ನಟ ಅಜಯ್‌ ದೇವ್ಗನ್‌ ತಿಳಿಸಿದ್ದಾರೆ.

47 ವರ್ಷದ ಅಜಯ್‌ ದೇವ್ಗನ್‌ ಶನಿವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ ಪ್ರಸ್ತುತ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ದೇಶದ ವಿಚಾರ ಹಾಗೂ ಸಂಸ್ಕೃತಿಯ ಬಗ್ಗೆ ಮಾತನಾಡಿ ಒಬ್ಬರನ್ನೊಬ್ಬರು ಪ್ರತ್ಯೇಕಿಸಿಕೊಳ್ಳಬಾರದು. ಪಾಕಿಸ್ತಾನಿ ಕಲಾವಿದರೊಂದಿಗೆ ಸದ್ಯದ ಪರಿಸ್ಥಿತಿಯಲ್ಲಿ ನಟಿಸುವುದಿಲ್ಲ. ನನ್ನ ಚಿತ್ರ ‘ಶಿವೈ’ ಪಾಕಿಸ್ತಾನದಲ್ಲಿ ಬಿಡುಗಡೆಯಾಗದಿದ್ದರೂ ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ.

‘ಮೊದಲು ನಾವು ಭಾರತೀಯರು. ಪಾಕ್‌ ಕಲಾವಿದರು ಭಾರತಕ್ಕೆ ಬಂದು ಪ್ರಗತಿ ಸಾಧಿಸಿದ್ದರೂ ಅವರು ತಮ್ಮ ದೇಶಕ್ಕೆ ಬೆಂಬಲ ಸೂಚಿಸಿದ್ದಾರೆ. ಎಂದು ಅಜಯ್‌ ದೇವ್ಗನ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಅಜಯ್‌ ದೇವ್ಗನ್‌ ಅವರ ಪತ್ನಿ ಕಾಜೋಲ್‌ ತಮ್ಮ ಪತಿ ಕೈಗೊಂಡ ನಿರ್ಧಾರಕ್ಕೆ ಟ್ವೀಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

Comments are closed.